ಪುನರ್ವಸತಿ ಕಾರ್ಯಕರ್ತರ ನೇಮಕಾತಿಗಾಗಿ ಅರ್ಜಿ ಆಹ್ವಾನ

ಬೆಂಗಳೂರು : ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿನ ತಾಲ್ಲೂಕು ಪಂಚಾಯಿತಿ/ ನಗರ ಸಭೆ/ಪುರಸಭೆ ಹಾಗೂ ಬೃಹತ್ ಬೆಂಗಳೂರು ನಗರ ಪಾಲಿಕೆಯ ವ್ಯಾಪ್ತಿಯ 08 ವಲಯಗಳ ಖಾಲಿ ಇರುವ ವಾರ್ಡ್ ಗಳಲ್ಲಿ ಗೌರವಧನದ ಆಧಾರದ ಮೇಲೆ ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರನ್ನು ನೇಮಕಾತಿಗಾಗಿ ಅರ್ಹ ವಿಕಲಚೇತನರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ಎಸ್,ಎಸ್,ಎಲ್,ಸಿ ಯಲ್ಲಿ ಉತ್ತೀರ್ಣ/ಅನುತ್ತೀರ್ಣತೆ ಹೊಂದಿರಬೇಕು. ಮಾಸಿಕ ಗೌರವಧನ ರೂ. 9000/- ಗಳು ನೀಡಲಾಗುವುದು.ಆಸಕ್ತ ವಿಕಲಚೇತನರು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಹೊಸೂರು ರಸ್ತೆ, ಬೆಂಗಳೂರು ನಗರ ಜಿಲ್ಲೆ ಇಲ್ಲಿ ಫೆಬ್ರವರಿ 24ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-29752324 ಅಥವಾ ಬೆಂಗಳೂರು ಉತ್ತರ ಅರುಣ ಕುಮಾರ್.ಎಸ್. 7411520526, ಯಲಹಂಕ ಚಂದ್ರಶೇಖರ್. ಎಸ್ 9590676975, ಬೆಂಗಳೂರು ದಕ್ಷಿಣ ಗೋಪಾಲ ಕೃಷ್ಣ 8861328076, ಬೆಂಗಳೂರು ಪೂರ್ವ ಕಾಂತೇಶ್ 7090593352, ಆನೇಕಲ್ ಕುಮಾರ್ 8748903812 ತಾಲ್ಲೂಕಿನ ಎಂ.ಆರ್.ಡಬ್ಲ್ಯೂಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.