ಡಿ.1ರಿಂದ ಸುರತ್ಕಲ್ ಟೋಲ್ ಸಂಗ್ರಹ ಸ್ಥಗಿತ : ದಕ್ಷಿಣಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಆದೇಶ

ಮಂಗಳೂರು: ಸುರತ್ಕಲ್ ಎನ್ ಐ ಟಿಕೆ ಬಳಿ ಸುಂಕ ಸಂಗ್ರಹ ಕೇಂದ್ರಕ್ಕೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆ ನಿರ್ದೇಶಕರ ಪತ್ರದ ಆಧಾರದಲ್ಲಿ ಡಿಸೆಂಬರ್ 1ರಿಂದ ಟೋಲ್ ಕೇಂದ್ರದಲ್ಲಿ ಸುಂಕ ಸಂಗ್ರಹ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ರವಿ ಕುಮಾರ್ ಎಂ ಆರ್ ತಿಳಿಸಿದ್ದಾರೆ.ನ.30 ರ ಮಧ್ಯರಾತ್ರಿ ಗಂಟೆಗೆ ಇದು ಜಾರಿಗೆ ಬರಲಿದ್ದು ಸಾರ್ವಜನಿಕರು ಸುರತ್ಕಲ್ ಟೋಲನ್ನು ಯಾವುದೇ ಸುಂಕ ಪಾವತಿಸದೆ ದಾಟಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.ಇನ್ನೊಂದೆಡೆ ನಿರೀಕ್ಷೆಯಂತೆ ಹೆಜಮಾಡಿಯಲ್ಲಿ ಟೋಲ್ ಮೊತ್ತ ದುಬಾರಿಯಾಗಲಿದೆ.