ಜಿಎಸ್ಟಿ ಮಂಡಳಿ ಸಭೆ| ಮಹತ್ವದ ನಿರ್ಧಾರ ಕೈಗೊಂಡ ನಿರ್ಮಲಾ ಸೀತಾರಾಮನ್

ಆನ್ಲೈನ್ ಗೇಮಿಂಗ್ ಮೇಲಿನ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ಪ್ರಮುಖ ಅಜೆಂಡಾಗಳ ಬಗ್ಗೆ ಈ ಬಾರಿಯ GST ಮಂಡಳಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ಜಿಎಸ್ಟಿ ಮಂಡಳಿಯ 48ನೇ ಸಭೆ ಮುಕ್ತಾಯಗೊಂಡ ಬಳಿಕ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ, ತೆರಿಗೆ ಹೆಚ್ಚಳದ ನಿರ್ಧಾರ ಕೈಗೊಂಡಿಲ್ಲ. ಹೊಸದಾಗಿ ಯಾವುದೇ ವಸ್ತುವಿನ ಮೇಲೆ ತೆರಿಗೆ ವಿಧಿಸಿಲ್ಲ. ತಂಬಾಕು ಮತ್ತು ಗುಟ್ಖಾ ಮೇಲಿನ ತೆರಿಗೆ ಬಗ್ಗೆ ಚರ್ಚಿಸಲು ಸಮಯದ ಅಭಾವದ ಕಾರಣ ಸಾಧ್ಯವಾಗಿಲ್ಲ ಎಂದರು.