ಡಾ. ಪದ್ಮಾವತಿ ವೆಂಕಟೇಶಗೆ ಚಿನ್ನದ ಪ್ರಶಸ್ತಿ

ಹುಬ್ಬಳ್ಳಿಯ ಅಕ್ಷಯ ಪಾರ್ಕ್ ನ ಅಥರ್ವ ಆಯುರ್ವೇದ ಕ್ಲಿನಿಕ್ ನ ಖ್ಯಾತ ಆಯುರ್ವೇದ ಮತ್ತು ಪಂಚಕರ್ಮತಜ್ಞರಾದ ಡಾ. ಪದ್ಮಾವತಿ ವೆಂಕಟೇಶ ಅವರಿಗೆ ಪ್ರಸಕ್ತ ಸಾಲಿನ ವನಸ್ಪತಿ ವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಅತ್ಯುತ್ತಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೆಂದರೆ ಅದೊಂದು ದೊಡ್ಡ ಸವಾಲೇ ಸರಿ. ಅಲೋಪತಿ ಔಷಧಿಗಳು ಆರೋಗ್ಯದ ದೃಷ್ಟಿಯಿಂದ ಮಾರಕವಾಗಿವೆ. ಇಂತಹ ಸಂದರ್ಭಗಳಲ್ಲಿ ಎಷ್ಟೋ ಬಡವರಿಗೆ, ಸಮಾಜದಲ್ಲಿನ ಅಸಹಾಯಕರಿಗೆ ಮನೆಯಲ್ಲಿಯೇ ತಯಾರಿಸಿದ ಆರ್ಯುವೇದ ಔಷಧೀಯನ್ನ ನೀಡಿ ಗುಣಮುಖ ಮಾಡಿದ ಶ್ರೇಯಸ್ಸು ಡಾ. ಪದ್ಮಾವತಿ ಕುಲಕರ್ಣಿ ಅವರಿಗೆ ಸಲ್ಲುತ್ತದೆ. ಅನೇಕ ರೀತಿಯ ರೋಗಿಗಳಿಗೆ ಮನೆಯಲ್ಲಿಯೇ ಉಪಚಾರ ಸಹ ಮಾಡಿದ್ದಾರೆ. ಇವರಿಗೆ 2021 ನೇ ಸಾಲಿನ ವನಸ್ಪತಿ ವಿದ್ಯಾಪೀಠದಿಂದ ಆಯುರ್ವೇದ ಶ್ರೇಷ್ಠ ಪ್ರಶಸ್ತಿಯನ್ನು ಕೊಲ್ಲಾಪುರದಲ್ಲಿ ಮಂತ್ರಿ ಸತೇಜ್ ಪಾಟೀಲ್ ಅವರಿಂದ ಸನ್ಮಾನ ಪಡೆದುಕೊಂಡಿದ್ದು ಹೆಮ್ಮೆಯ ವಿಷಯವಾಗಿದೆ. ಡಾ. ಪದ್ಮಾವತಿ ವೆಂಕಟೇಶ ಅವರು ಸಂಪೂರ್ಣವಾಗಿ ಆಯುರ್ವೇದದಲ್ಲಿ ಸಾಕಷ್ಟು ಪರಿಣತಿ ಹೊಂದಿದ್ದು ಹೈಪೋಥೈರಾಯಸಂ, ಸ್ಥೂಲಕಾಯದ ಕೀಲು ನೋವು, ಅಧಿಕ ರಕ್ತದೊತ್ತಡ, ಮಧುಮೇಹ, ಚರ್ಮ ಮತ್ತು ನರ ರೋಗದ ಕಾಯಿಲೆಗಳಿಗೆ ಗಿಡಮೂಲಿಕೆ ಔಷಧಿಗಳನ್ನು ತಯಾರಿಸುತ್ತಾರೆ. ಅವರು ಆಯುರ್ವೇದ ಕಾಸ್ಮೆಟಾಲಜಿ ಮತ್ತು ಗರ್ಭ ಸಂಸ್ಕಾರವನ್ನು ಅಧಿಕೃತ ರೀತಿಯಲ್ಲಿ ಅಭ್ಯಾಸ ಮಾಡುತಿದ್ದು ಹೊಸ ಆಯಾಮಕ್ಕೆ ಸಹ ಮುಂದಾಗಿದ್ದಾರೆ.