ಅಕ್ಷರಮ್ಮನ ಆ ದೇವಾಲಯದ ಪರಸ್ಥಿತಿ ಹೇಗಾಗಿದೆ ಗೊತ್ತಾ?

ಅಕ್ಷರಮ್ಮನ ಆ ದೇವಾಲಯದ ಪರಸ್ಥಿತಿ ಹೇಗಾಗಿದೆ ಗೊತ್ತಾ?

ಧಾರವಾಡ : ಅದು ಅಕ್ಷರಮ್ಮನ ದೇವಾಯಲ. ಆ ದೇವಾಲಯಕ್ಕೆ ಬಂದ್ರೆ ಸಾಕು ತನ್ನಿಂತಾನೇ ಸರಸ್ವತಿ ಮಾತೆಯ ದರ್ಶನವಾಗತ್ತೆ. ಆದ್ರೆ ಜ್ಞಾನದ ಆಲಯವಾದ ಆ ದೇವಾಲಯವೇ ಇದೀಗ ಸೋರುತ್ತಿದೆ. ಹೀಗಾಗಿ ಅದರೊಳಗಿರುವ ಅಕ್ಷರ ಕಣಜ ಹಾಳಾಗುವಂತಾಗಿದೆ ಅರೆ ಅದ್ಯಾವುದಪ್ಪ ಅಕ್ಷರ ದೇವಾಯಲ ಅಂತಿರಾ ? ಹಾಗಿದ್ರೆ ಈ ಸ್ಟೋರಿ ನೋಡಿ

ಸಧ್ಯ ನಾವ್ ನಿಮಗೆ ಹೇಳ್ತಾಯಿರೊದು ಅಕ್ಷರಮ್ಮನ ಆಗರ ಜ್ಞಾನ ಉತ್ಪತ್ತಿಯ ತವರು ಅನಿಸಿಕೊಳ್ಳೊ ಗ್ರಂಥಾಲಯದ ಬಗ್ಗೆ.ಮೊಬೈಲ್ ಹಾವಳಿ ಇಲ್ಲದ ಕಾಲವೊಂದಿತ್ತು. ಆಗ ಪುಸ್ತಕಕ್ಕೆ ಅಂಟಿಕೊಳ್ಳುವ ಜನರಿದ್ದರು. ಈಗಲೂ ಪುಸ್ತಕ ಓದುವ ಹಾಗೂ ಪ್ರತಿನಿತ್ಯ ಪತ್ರಿಕೆ ಓದುವ ಹವ್ಯಾಸಿಗರು ಲಕ್ಷ ಲಕ್ಷ ಸಂಖ್ಯೆಯಲ್ಲಿದ್ದಾರೆ. ಅವರಿಗಾಗಿಯೇ ಗ್ರಂಥಾಲಯ ವ್ಯವಸ್ಥೆ ಹುಟ್ಟಿಕೊಂಡಿದೆ.

ಇನ್ನು ಗ್ರಂಥಾಲಯ ಅಂದ್ರೆ  ಸುಸಜ್ಜಿತವಾಗಿರಬೇಕು. ಓದಿನ  ವಾತಾವರಣಕ್ಕೆ ಪೂರಕವಾಗಿರಬೇಕು ಅಷ್ಟೇ ಅಲ್ಲದೇ ಓದುಗರನ್ನು ಓದಿಗಾಗಿ ಪ್ರೇರೇಪಿಸುವಂತಿರಬೇಕು. ವಿಷಾದ ಅಂದ್ರೆ ಧಾರವಾಡದ ಕಮಲಾಪುರ ಬಡಾವಣೆಯಲ್ಲಿರುವ ಗ್ರಂಥಾಲಯದ ವ್ಯವಸ್ಥೆ ಅದಕ್ಕೆ ತದ್ವಿರುದ್ದವಾಗಿದೆ

ಇದು ಧಾರವಾಡದ ನಗರ ಕೇಂದ್ರ ಗ್ರಂಥಾಲಯದ ಶಾಖೆಯೂ ಹೌದು. ಆದ್ರೆ ಈ ಗ್ರಂಥಾಲಯಕ್ಕೆ ಬಹಳ ಹಳೆಯದಾದ  ಕಟ್ಟಡವಿದೆ. ಮಳೆ ಬಂದ್ರೆ ಸಾಕು ಎಲ್ಲರೂ ಗ್ರಂಥಾಲಯ ಬಿಟ್ಟು ಹೊರಗಡೆ ಹೋಗುವಂತಾಗುತ್ತದೆ.ಏಕೆಂದ್ರೆ ಮಾಳಿಗೆ ಸೋರಿ ಗ್ರಂಥಾಲಯದ ತುಂಬಾ ನೀರು ಆವರಿಸುತ್ತೆ  

ಈ ಬಡಾವಣೆಯಲ್ಲಿನ  ಹಿರಿಯರು ಹಾಗೂ ಸೇವಾ ನಿವೃತ್ತಿ ಹೊಂದಿದ ಜನರು ಪ್ರತಿನಿತ್ಯವೂ ಈ ಗ್ರಂಥಾಲಯಕ್ಕೆ ಬರ್ತಾರೆ. ಪತ್ರಿಕೆಗಳನ್ನು ಓದುತ್ತಾರೆ ಆದರೆ ಗ್ರಂಥಾಲಯದ ಕಟ್ಟಡವೇ ಸುಸಜ್ಜಿತವಾಗಿರದ ಕಾರಣ ಅವರೆಲ್ಲ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಕಟ್ಟಡ ಬಣ್ಣ ಕಂಡು ದಶಕಗಳೇ ಕಳೆದಿವೆ. ಅಲ್ಲದೇ ಕಟ್ಟಡದ ಮೇಲ್ಛಾವಣಿ ಕಳಚಿ ಬೀಳುತ್ತಿದೆ. ಗೋಡೆ ಬಿರುಕು ಬಿಟ್ಟಿದೆ.ನಾಮಫಲಕವಂತೂ ಇಲ್ವೇ ಇಲ್ಲ  ಹೀಗಾಗಿ  ನಗರ ಕೇಂದ್ರ ಗ್ರಂಥಾಲಯದವರು ಹಾಗೂ ಸ್ಥಳೀಯ ಶಾಸಕರು, ಸಂಸದರು ಈ ಕಟ್ಟಡದ ದುರಸ್ಥಿ ಮಾಡಿಸಿ ಸುಸಜ್ಜಿಯ ಗ್ರಂಥಾಲಯವನ್ನಾಗಿ ಮಾಡಬೇಕು ಹಾಗೂ ಒಳ್ಳೊಳ್ಳೆಯ ಪುಸ್ತಕಗಳನ್ನು ಓದಲು ತಂದಿಡಬೇಕು ಅನ್ನೊದು ಅಕ್ಷರ ಪ್ರೇಮಿಗಳ ಒತ್ತಾಯವಾಗಿದೆ

ನೈನ್ ಲೈವ್ ನ್ಯೂಸ್ ಧಾರವಾಡ