ನನಗೆ ಮುಂದಿನ ಜನ್ಮದಲ್ಲಿ ʼಗೌಡʼ ಆಗಿಯೇ ಜನಿಸಬೇಕು ಎಂಬ ಆಸೆ: ಸಿ.ಟಿ ರವಿ
ಮಂಡ್ಯ: ಮಗ , ಮೊಮ್ಮಗ ಹಾಗೂ ಮರಿಮಗನಿಗಾಗಿ ನಾವು ಕನ್ಣೀರು ಹಾಕಿಲ್ಲ. ರಾಜು ,ರುದ್ರೇಶ್ , ಪ್ರವೀಣ್ ಗಾಗಿ ನಾವು ಕಣ್ಣೀರು ಹಾಕಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಕುಂಕುಮ ನೋಡಿದ್ರೆ ಹೆದರಿಕೆ ಆಗುತ್ತೆ ಅಂತಾರೆ.
ಆದ್ರೂ ಕರ್ನಾಟಕದಲ್ಲೇ ಗೌಡ ಮತ್ತು ಹಿಂದೂವಾಗಿ ಹುಟ್ಟಬೇಕು ಎಂಬ ಆಸೆ ಇದೆ ಎಂದರು.
ಇನ್ನು ಮಾಂಸದ ಊಟ ಮಾಡಿ ದೇವಸ್ಥಾನ ಪ್ರವೇಶಿಸಿದ್ದಾರೆ ಎಂಬ ಆರೋಪಕ್ಕೆ ಸ್ಪಷ್ಟನೆ ಕೂಡ ನೀಡಿದ್ದಾರೆ. ನಾನು ಸಿದ್ದರಾಮಯ್ಯ ಥರ ಅಲ್ಲ, ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುತ್ತೇನೆ ಅಂತ ಹೇಳುವ ದಾರ್ಷ್ಟ್ಯತೆ ನನ್ನಲ್ಲಿಲ್ಲ ಎಂದರು. ನಾನು ಒಂದು ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದವನು , ಕಾಂಗ್ರೆಸ್ ಪಕ್ಷದ ಟೂಲ್ ಕಿಟ್ ಗೆ ಬಲಿಯಾಗುವಂಥ ವ್ಯಕ್ತಿ ನಾನಲ್ಲ ಎಂದಿದ್ದಾರೆ.