ಚಿತ್ರೀಕರಣ ಮುಗಿಸಿದ 'ರೆಮೋ': ಶೀಘ್ರದಲ್ಲೇ ತೆರೆಗೆ

ಚಿತ್ರೀಕರಣ ಮುಗಿಸಿದ 'ರೆಮೋ': ಶೀಘ್ರದಲ್ಲೇ ತೆರೆಗೆ

ಯುವ ನಟ ಇಶಾನ್‌ ಮತ್ತು ಆಶಿಕಾ ರಂಗನಾಥ್‌ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ “ರೆಮೋ’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿತು. ಒಂದೆಡೆ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಮತ್ತೂಂದೆಡೆ ಚಿತ್ರದಲ್ಲಿ ಕುಂಬಳಕಾಯಿ ಹೊಡೆಯುವ ಮೂಲಕ ಬಾಕಿಯಿದ್ದ ಕೊನೆಹಂತದ ಚಿತ್ರೀಕರಣ ವನ್ನು ಪೂರ್ಣಗೊಳಿಸಿದೆ.

“ಜೈ ಆದಿತ್ಯ ಫಿಲಂಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ರೆಮೋ’ ಚಿತ್ರಕ್ಕೆ ಕನ್ನಡ ಚಿತ್ರರಂಗದ ಬಿಗ್‌ ಬಜೆಟ್‌ ಸಿನಿಮಾಗಳ ನಿರ್ಮಾಪಕರಲ್ಲಿ ಒಬ್ಬರಾಗಿರುವ ಸಿ.ಆರ್‌ ಮನೋಹರ್‌ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಪವನ್‌ ಒಡೆಯರ್‌ “ರೆಮೋ’ ಚಿತ್ರಕ್ಕೆ ಆಯಕ್ಷನ್‌-ಕಟ್‌ ಹೇಳುತ್ತಿದ್ದಾರೆ.

ಇನ್ನು “ರೆಮೋ’ ಚಿತ್ರದಲ್ಲಿ ಇಶಾನ್, ಅಶಿಕಾ ರಂಗನಾಥ್‌ ಅವರೊಂದಿಗೆ ತಮಿಳು ನಟ ಶರತ್‌ ಕುಮಾರ್‌, ಮಧುಬಾಲ, ರಾಜೇಶ್‌ ನಟರಂಗ, ಅಚ್ಯುತ್‌ ಕುಮಾರ್‌ ಹೀಗೆ ಅನೇಕ ಕಲಾವಿದರ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. “ರೆಮೋ’ ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದು, ಚಿತ್ರಕ್ಕೆ ವೈದಿ ಛಾಯಾಗ್ರಣವಿದೆ.

ಚಿತ್ರತಂಡದ ಮೂಲಗಳ ಪ್ರಕಾರ ಈಗಾಗಲೇ, “ರೆಮೋ’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಕೂಡ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಚಿತ್ರದ ಫ‌ಸ್ಟ್‌ಲುಕ್‌ ಟೀಸರ್‌ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.