ಒಂದೇ ಚಿತ್ರದಲ್ಲಿ ಶಿವಣ್ಣ, ರಾಜ್ ಬಿ ಶೆಟ್ಟಿ & ಉಪ್ಪಿ; ಇವರದ್ದೇ ನಿರ್ದೇಶನ

ಶಿವಣ್ಣ ತಮ್ಮ ಗೆಳೆಯ ಉಪೇಂದ್ರ ಜತೆ ಮಲ್ಟಿಸ್ಟಾರರ್ ಚಿತ್ರದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿಯೇ ಹರಿದಾಡಿತ್ತು. ಈ ಕುತೂಹಲಕ್ಕೆ ಇದೀಗ ಸ್ವತಃ ಶಿವಣ್ಣ ಅವರೇ ಸಂದರ್ಶನದಲ್ಲಿ ಈ ವಿಷಯದ ಕುರಿತು ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ಈ '45' ಚಿತ್ರದಲ್ಲಿ ತಮ್ಮ & ಉಪೇಂದ್ರ ಜತೆಗೆ ರಾಜ್ ಬಿ ಶೆಟ್ಟಿ ಸಹ ಇರಲಿದ್ದಾರೆ ಎಂಬ ಮಾಹಿತಿಯನ್ನು ಶಿವಣ್ಣ ಹಂಚಿಕೊಂಡಿದ್ದಾರೆ. ಇನ್ನು ಈ ಚಿತ್ರಕ್ಕೆ ಅರ್ಜುನ್ ಜನ್ಯ ನಿರ್ದೆಶನ ಮಾಡಲಿದ್ದಾರೆ.