ಕಾಸರಗೋಡು: ಕೋವಿಡ್ ಕೇಂದ್ರದಿಂದ ಪರಾರಿಯಾಗಿದ್ದ ವ್ಯಕ್ತಿ ಅರೆಸ್ಟ್

ಕಾಸರಗೋಡು: ಕೋವಿಡ್ ಕೇಂದ್ರದಿಂದ ಪರಾರಿಯಾಗಿದ್ದ ವ್ಯಕ್ತಿ ಅರೆಸ್ಟ್

ಕಾಸರಗೋಡು: ಐದು ತಿಂಗಳ ಹಿಂದೆ ಕೋವಿಡ್ ನಿರೀಕ್ಷಣಾ ಕೇಂದ್ರದಿಂದ ಪರಾರಿಯಾಗಿದ್ದ ಆರೋಪಿ ಯೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಮೂಲಡ್ಕ ದ ನೌಶಾದ್ ಶೇಕ್ ( ೩೬) ಪರಾರಿಯಾಗಿದ್ದ ಆರೋಪಿ . ಮಾದಕ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿತ್ತು . ಗುರುವಾರ ಬೆಳಿಗ್ಗೆ ಕಾಸರಗೋಡು ರೈಲು ನಿಲ್ದಾಣ ಪರಿಸರದಿಂದ ಈತನನ್ನು ಬಂಧಿಸಲಾಯಿತು .

ಮಾರ್ಚ್ ೨೭ ರಂದು ಮಾದಕ ವಸ್ತು ಸಹಿತ ಅಂಬಲತ್ತರ ದಿಂದ ಈತನನ್ನು ಬಂಧಿಸಲಾಗಿತ್ತು . ತಪಾಸಣೆಯಲ್ಲಿ ಕೋವಿಡ್ ಪಾಸಿಟಿವ್ ದ್ರಢಪ ಟ್ಟಿ ತ್ತು. ಈಹಿನ್ನಲೆಯಲ್ಲಿ ಈತನನ್ನು ಕಾ ಞ೦ ಗಾಡ್ ನ ಕೋವಿಡ್ ನಿರೀಕ್ಷಣಾ ಕೇಂದ್ರಕ್ಕೆ ಸೇರಿಸಲಾಗಿತ್ತು .ನಾಲ್ಕು ದಿನಗಳ ಬಳಿಕ ಈತ ಕೇಂದ್ರದಿಂದ ಪರಾರಿಯಾಗಿದ್ದನು .
ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು . ಈ ನಡುವೆ ಈತ ತಳಂಗರೆಯಲ್ಲಿರುವ ಸ್ನೇಹಿತನ ನನ್ನು ಭೇಟಿ ಮಾಡಲು ತಲಪಿರುವ ಬಗ್ಗೆ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿ ಲಭಿಸಿತ್ತು . ಇದರಿಂದ ಬೆಳಿಗ್ಗೆಯಿಂದ ಪೊಲೀಸರು ನಿಗಾ ಇರಿಸಿದ್ದರು. ಸ್ಕೂಟರ್ ನಲ್ಲಿ ತೆರಳುತ್ತಿದ್ದ ನೌಶಾದ್ ನನ್ನು ಪೊಲೀಸರು ವಶಕ್ಕೆ ಪಡೆಯಲೆತ್ನಿಸಿದರೂ ಪರಾರಿಯಾಗಲೆತ್ನಿಸಿದ್ದು , ಬೆನ್ನಟ್ಟಿದ ಪೊಲೀಸರು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾದರು .