ರೈತನೆ ದೇಶದ ಬೆನ್ನು ಎಲುಬು
ಕೃಷಿ ಕ್ಷೇತ್ರ ಬೆಳೆದರೆ ಮಾತ್ರ ಇತರ ಕ್ಷೇತ್ರಗಳು ಅಭಿವೃದ್ಧಿಯಾಗುತ್ತವೆ.ಆಡಳಿತಕ್ಕೆ ಬರುವ ಸರ್ಕಾರಗಳು ಕೃಷಿ ಕ್ಷೇತ್ರದ ಬೆಳವಣಿಗೆ ಹೆಚ್ಚಿನ ಆದ್ಯತೆ ಮತ್ತು ಪ್ರಾಮುಖ್ಯತೆ ನೀಡಬೇಕು ಎಂದು ರೈತ ಸೇನಶ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಲಿಂಗೇಶ ( ವರುಣಗೌಡ್ರ) ಪಾಟೀಲ ಹೇಳಿದರು.ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಬುಧವಾರ ದೀಪಾವಳಿ ಅಂಗವಾಗಿ ರೈತ ಸೇನಾ ಕರ್ನಾಟಕ ಸಂಘಟನೆ ವತಿಯಿಂದ ಕೃಷಿ ಕಾರ್ಮಿಕರಿಗೆ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಕ್ಕೀರೇಶ ಕೊಂಡಾಯಿ ಅವರಿಗೆ ಸನ್ಮಾಸಿಲಾಯಿತು.ಈ ಸಂದರ್ಭದಲ್ಲಿ ಕೃಷಿ ಕಾರ್ಮಿಕರಾದ ಸುರೇಶ ಭಿಮ್ಮಣ್ಣನವರ, ಕೋಟೇಪ್ಪ ಸಂಜೀವಣ್ಣವರ, ಹನುಮಂತ ಈಟಿ, ಮೆಹಬೂಬ್ ಮುತ್ತೆಖಾನ, ನಿಂಗಪ್ಪ ಬೀಮಣ್ಣನವರ, ನೀಲಪ್ಪ ಸುಣಗಾರ, ಬಾಬುಸಾಬ ಮತ್ತೇಖಾನ, ಹುಲಸೂಗಿ ಗ್ರಾಮ ಪಂಚಾಯತಿ ಸದಸ್ಯ ನಾಗರಾಜ ಶಿಂಧೆ, ಜಾನಪದ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶರೀಫ ಮಾಕಾಪುರ, ತಾರಕೇಶ ಮಠದ, ಬಸಯ್ಯ ಹಿರೇಮಠ, ಹಲವರು ಉಪಸ್ಥಿತರಿದ್ದರು.