ಈಕೆಯ ಮಾದಕ ಫೋಟೋ, ಉದ್ರೇಕಕಾರಿ ಮೆಸೇಜ್​ಗೆ ಬೋಲ್ಡ್ ಆದ ಬಳ್ಳಾರಿ ಶಿಕ್ಷಕನಿಗೆ 4 ವರ್ಷದ ಬಳಿಕ ಎದುರಾಯ್ತು ಸಂಕಷ್ಟ!

ಈಕೆಯ ಮಾದಕ ಫೋಟೋ, ಉದ್ರೇಕಕಾರಿ ಮೆಸೇಜ್​ಗೆ ಬೋಲ್ಡ್ ಆದ ಬಳ್ಳಾರಿ ಶಿಕ್ಷಕನಿಗೆ 4 ವರ್ಷದ ಬಳಿಕ ಎದುರಾಯ್ತು ಸಂಕಷ್ಟ!

ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿಯೊಬ್ಬಳ ಜತೆ ಮದ್ವೆ ಆಗುವ ಕನುಸು ಕಂಡಿದ್ದ ಬಳ್ಳಾರಿ ಜಿಲ್ಲೆಯ ಶಿಕ್ಷಕರೊಬ್ಬರಿಗೆ ಸಂಕಷ್ಟ ಎದುರಾಗಿದೆ. ನೀನಂದ್ರೆ ನನಗಿಷ್ಟ, ನಾನು ನಿನ್ನನ್ನೇ ಮದ್ವೆ ಆಗ್ತೀನಿ ಎಂದು ಹೇಳುತ್ತಿದ್ದಾಕೆಯ ಅಸಲಿ ಮುಖ ನಾಲ್ಕು ವರ್ಷದ ಬಳಿಕ ಬಯಲಾಗಿದ್ದು, ಶಿಕ್ಷಕನೀಗ ಸೈಬರ್​ ಕ್ರೈಂ ಠಾಣೆ ಮೆಟ್ಟಿಲೇರಿದ್ದಾರೆ.

ದೇವೆಂದ್ರಪ್ಪ ಮೋಸ ಹೋದವರು. ಇವರಿಗೆ ಈಗಾಗಲೇ ಬೇರೊಬ್ಬರೊಂದಿಗೆ ಮದುವೆ ಆಗಿದ್ದು, ಕೌಟುಂಬಿಕ ಕಲಹದಿಂದ ಪತ್ನಿಯಿಂದ ದೂರವಾಗಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ದೇವೇಂದ್ರಪ್ಪ, 2ನೇ ಮದುವೆ ಆಗಲು ಮ್ಯಾಟ್ರಿಮೋನಿಯಲ್ಲಿ ಪ್ರೊಪೈಲ್​ ಹಾಕಿದ್ದರು. ಯುವತಿಯೊಬ್ಬಳು ತನಗೆ ಒಪ್ಪಿಗೆ ಇದೆ ಎಂದು ಫೋಟೋ ಹಾಗೂ ಪ್ರೊಪೈಲ್ ಕಳಿಸಿದ್ದಳು. ಇಬ್ಬರ ನಡುವೆ ಸ್ನೇಹ ಬೆಳೆದಿತ್ತು.

ನನ್ನ ಹೆಸರು ಹರಿತಾ, ಕೇರಳ ಮೂಲದವಳು. ನಾನೀನಗ ಎಂಬಿಬಿಎಸ್​ ಓದುತ್ತಿರುವೆ ಎಂದು ಪರಿಚಯ ಹೇಳಿಕೊಂಡಿದ್ದಳು. ನಿಮ್ಮನ್ನು ಮದುವೆ ಆಗೋಕೆ ನಾನು ರೆಡಿ ಎಂದೂ ಹೇಳಿದ್ದಳು. ಚೆಂದ ಚೆಂದ ಫೋಟೋ ಕಳಿಸಿ ಶಿಕ್ಷಕನನ್ನು ಬಲೆಗೆ ಬೀಳಿಸಿಕೊಂಡಿದ್ದಳು. ಅಷ್ಟೇ ಅಲ್ಲ, ಮಾದಕ ಫೋಟೋ, ಉದ್ರೇಕಕಾರಿ ಮೆಸೇಜ್​ ಕಳುಹಿಸಿ ಪುಸಲಾಯಿಸಿದ್ದಳು. ನಂತರ ತನ್ನ ಸ್ನೇಹಿತೆಯರನ್ನೂ ಫೋನ್​ ಮೂಲಕ ಪರಿಚಯಿಸಿದ್ದಳು.

ನಂತರ ಕಷ್ಟ ಅಂತೇಳಿ ಹಂತ ಹಂತವಾಗಿ ಲಕ್ಷ ಲಕ್ಷ ಹಣ ಪೀಕಿದಳು. ನಿನ್ನನ್ನು ನೋಡಬೇಕು ಎಂದು ದೇವೇಂದ್ರಪ್ಪ ಹೇಳಿದರೆ ನೆಪ ಹೇಳುತ್ತಲೇ ವರ್ಷಗಟ್ಟಲೇ ತಳ್ಳಿಹಾಕಿದ್ದಳು. ನಾಲ್ಕೈದು ವರ್ಷದಲ್ಲಿ ಒಮ್ಮೆಯೂ ದೇವೆಂದ್ರಪ್ಪರನ್ನ ಭೇಟಿಯಾಗಿಲ್ಲ. ಮಾದಕ ನೋಟದ ಫೋಟೋಗಳು, ಉದ್ರೇಕಕಾರಿ ಮೆಸೇಜ್​ಗೆ ಬೋಲ್ಡ್ ಆಗಿದ್ದ ದೇವೆಂದ್ರಪ್ಪ, ಯುವತಿ ಜಾಲದಲ್ಲಿ ಬಿದ್ದು ಯಾಮಾರಿದ್ದಾರೆ. ಇದೀಗ ಆಕೆ ಪ್ರೇಯಸಿಯಲ್ಲ, ಹಣ ಪೀಕುವ ವಂಚಕಿ. ತಾನು ಇಷ್ಟು ದಿನ ಬಿದ್ದದ್ದು ಮೋಸದ ಬಲೆಗೆ ಎಂದು ದೇವೇಂದ್ರಪ್ಪಗೆ ಜ್ಞಾನೋದಯ ಆಗಿದೆ.