ಆ ಅಪಘಾತದಲ್ಲಿ ‘ಹಂಚಿ’ನಾಟ… ಫೀಲೋಮಿ’ನೋಟ’: ‘ದಗಲ್ ಬಾಜಿ ತ್ರಿಸ್ಟಾರ್’…

ಹುಬ್ಬಳ್ಳಿ: ಛೋಟಾ ಬಾಂಬೆಯಲ್ಲಿ ದಕ್ಷ ಪೊಲೀಸ್ ಕಮೀಷನರ್ ಇದ್ದಾಗಲೂ ಕೆಲವು ಹಣಬಾಕರು ಹೇಗೇಗೆ ಲೂಟಿ ಹೊಡೆಯುತ್ತಾರೆ ಎಂಬುದಕ್ಕೆ ಘಟನೆಯೊಂದು ಸಾಕ್ಷಿ ನುಡಿಯುತ್ತಿದ್ದು, ಮುಖವಾಡ ಹೊತ್ತ ತ್ರಿಸ್ಟಾರನ ಬಣ್ಣವನ್ನ ಕಳಿಚಬೇಕಿದೆ.
ಹುಬ್ಬಳ್ಳಿಯ ಪ್ರಮುಖ ಶ್ರೀಮಂತರೊಬ್ಬರ ಮಗ ಮಾಡಿದ ಘಟನೆಯಲ್ಲಿ ಈಗಾಗಲೇ ಹಿರಿಯ ಅಧಿಕಾರಿಗಳ ಹೆಸರು ಹೇಳಿ “ಕರಿ ಚಸ್ಮಾ”ದ ಗಿರಾಕಿಯೋರ್ವ ಹಣ ಹೊಡೆದಿರುವುದು ಸಂಬಂಧಿಸಿದ ಅಧಿಕಾರಿಗಳಿಗೆ ಗೊತ್ತಾಗಿದೆ.
ಹಂಚಿನ ಮನೆಯಲ್ಲಿ ಕೂತವರಂತೆ ಕಾಣುವ ವಿಮಾನ ನಿಲ್ದಾಣದಲ್ಲಿದ್ದಾಗ ಮಾಜಿ ಸಿಎಂರನ್ನ ಕ್ಯಾಕರಿಸಿ ಉಗಿಯುತ್ತಿದ್ದ. ಅವರದ್ದೇ ಕೈ ಕಾಲು ಹಿಡಿದು ಮತ್ತೆ ಬಂದಿರುವ ತ್ರಿಸ್ಟಾರ್, ಹೆಣ ಬಿದ್ದ ಮೇಲೆ ಕೇಸ್ ದಾರಿ ತಪ್ಪಿಸಲು ಡೀಲಿಂಗ್ ಮಾಡಲು ಮುಂದಾಗಿರುವುದು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಷ್ಟೇ ಸತ್ಯವಾಗಿದೆ.