ದಾವಣಗೆರೆ: ಅಡಕೆ ತೋಟದಲ್ಲಿ ವಿದ್ಯುತ್ ತಂತಿ ತಗುಲಿ ಇಬ್ಬರ ದುರ್ಮರಣ
ದಾವಣಗೆರೆ: ಅಡಕೆ ತೋಟದಲ್ಲಿ ಮೋಟರ್ ಫಿಕ್ಸ್ ಮಾಡುವ ವೇಳೆಯಲ್ಲಿ ವಿದ್ಯುತ್ ತಂತಿ ತಗುಲಿ ಇಬ್ಬರು ಸಾವನ್ನಪ್ಪಿದ ಘಟನೆ ದಾವಣಗೆರೆ ತಾಲೂಕಿನ ಬಾಡ ಗ್ರಾಮದ ಬಳಿ ನಡೆದಿದೆ. ಮೃತಪಟ್ಟವರನ್ನು ಮಲ್ಲಿಕಾರ್ಜುನ(65), ಕತ್ತಕಗೆರೆ ಚಂದ್ರಪ್ಪ(45) ಅಡಿಕೆ ಅಂತ ತಿಳಿದು ಬಂಧಿದೆ.ತೋಟಕ್ಕೆ ನೀರು ಹಾಯಿಸುವ ಸಲುವಾಗಿ ಮಲ್ಲಿಕಾರ್ಜುನ ಎನ್ನುವವರು
ಪಂಪ್ ಸೆಟ್ ಆನ್ ಮಾಡಿದ ವೇಳೆಯಲ್ಲಿ ಮದರ್ ಬೋರ್ಡ್ ನಿಂದ ವಿದ್ಯುತ್ ಪ್ರವಹಿಸಿ ನೆಲಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಅವರ ರಕ್ಷಣೆಗೆ ಹೋದ ಕಾರ್ಮಿಕ ಚಂದ್ರಪ್ಪನಿಗೂ ವಿದ್ಯುತ್ ತಗುಲಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳಲಾಗಿದೆ.