ಐಪಿಎಲ್ ನಡವೆಯೇ ಧೋನಿ ಕಾಲು ಸ್ಪರ್ಶಿಸಿ ನಮಸ್ಕರಿಸಿದ ಅರ್ಜಿತ್ ಸಿಂಗ್! ಫೋಟೊ ವೈರಲ್
ಗುಜರಾತ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹದಿನಾರನೇ ಆವೃತ್ತಿಯು ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್) ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (ಜಿಟಿ) ತಂಡವನ್ನು ಎದುರಿಸುತ್ತಿದೆ.
ಜಿಟಿ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
ಪ್ರೇಕ್ಷಕರು ಪರದೆಯನ್ನೇ ನೋಡುತ್ತಿದ್ದಾಗ, ಖ್ಯಾತ ಗಾಯಕ ಅರ್ಜಿತ್ ಸಿಂಗ್ ಸಿಎಸ್‌ಕೆ ನಾಯಕ ಧೋನಿ ಕಾಲು ಸ್ಪರ್ಶಿಸಿದ್ದು ಕಂಡುಬಂದಿದೆ. ಅರಿಜಿತ್ ಸಿಂಗ್ ಧೋನಿಗೆ ನಮಸ್ಕರಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.