ಸುಳ್ಳು ಸುದ್ದಿ ಹರಡುತ್ತಿದ್ದ 3 ಯು ಟ್ಯೂಬ್ ಚಾನೆಲ್‌ ಪತ್ತೆ

ಸುಳ್ಳು ಸುದ್ದಿ ಹರಡುತ್ತಿದ್ದ 3 ಯು ಟ್ಯೂಬ್ ಚಾನೆಲ್‌ ಪತ್ತೆ

ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ಪ್ರಮುಖ ಸಂಸ್ಥೆಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದ್ದಕ್ಕಾಗಿ ಒಟ್ಟು 33 ಲಕ್ಷ ಚಂದಾದಾರರನ್ನು ಹೊಂದಿರುವ 3 ಯು ಟ್ಯೂಬ್ ಚಾನೆಲ್‌ಗಳನ್ನುಪತ್ತೆ ಹಚ್ಚಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನ್ಯೂಸ್ ಹೆಡ್‌ಲೈನ್ಸ್, ಸರ್ಕಾರಿ ಅಪ್‌ಡೇಟ್ ಮತ್ತು ಆಜ್ ತಕ್ ಲೈವ್ ಎಂಬ ಹೆಸರಿನ ಈ 3 ಚಾನೆಲ್‌ಗಳ ವಿರುದ್ಧದ ತನಿಕೆ ನಡೆಸಲಾಗಿದೆ ಎಂದು ತಿಳಿಸಿದೆ.