ಹೆಲ್ಮೆಟ್ ಇಲ್ಲದೇ ರೀಲ್ಸ್ ಮಾಡೋ ಮುನ್ನ ಈ ಸುದ್ದಿ ನೋಡಿ: ಟ್ರಾಫಿಕ್ ಪೊಲೀಸ್ ಹೊಸ ಪ್ಲ್ಯಾನ್
ಬೆಂಗಳೂರಿನಲ್ಲಿ ಬೈಕ್ ಮೇಲೆ ಸ್ಟಂಟ್ ಮಾಡಿ ರೀಲ್ಸ್ ಮಾಡುತ್ತಿದ್ದ ಪುಂಡರನ್ನು ನಗರ ಟ್ರಾಫಿಕ್ ಪೊಲೀಸರು ಹುಡುಹುಡುಕಿ ದಂಡ ಹಾಕಲು ಶುರು ಮಾಡಿದ್ದಾರೆ. ಬ್ಲರ್ ಮಾಡುವ ಆಯ್ಕೆ ಬಳಸುತ್ತಿರುವ ಪುಂಡರು ರೀಲ್ಸ್ಗಳಲ್ಲಿ ಬೈಕ್ಗಳ ನಂಬರ್ ಪ್ಲೇಟ್ ಕಾಣದಂತೆ ಎಚ್ಚರವಹಿಸುತ್ತಿದ್ದಾರೆ.
ನಂಬರ್ ಪ್ಲೇಟ್ ಮೂಲಕ ವಾಹನಗಳ ಮಾಲೀಕರನ್ನು ಗುರುತಿಸಿ, ದಂಡದ ನೊಟೀಸ್ಗಳನ್ನು ಕಳಿಸುತ್ತಿದ್ದಾರೆ. ಸಿಗ್ನಲ್ ಉಲ್ಲಂಘನೆ ಅಥವಾ ಬೇರೊಂದು ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ ಬೀಳುವ ವಾಹನ ಸವಾರರು ಹಳೆಯ ತಪ್ಪುಗಳ ದಂಡವನ್ನೂ ಸೇರಿಸಿ ಕಟ್ಟಬೇಕಾಗುತ್ತದೆ. 'ದಚ್ಚು ದಿವು' ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ರೀಲ್ಸ್ ಮಾಡುತ್ತಿದ್ದವರಿಗೆ ಪೊಲೀಸರು ಇದೇ ರೀತಿ ದಂಡದ ಮೂಲಕ ಚುರುಕು ಮುಟ್ಟಿಸಿದ್ದರು.
ಪೊಲೀಸರ ಕ್ರಮದಿಂದ ತಪ್ಪಿಸಿಕೊಳ್ಳಲು ರೀಲ್ಸ್ ಪುಂಡರು ಇದೀಗ ಮತ್ತೊಂದು ಉಪಾಯ ಕಂಡುಕೊಂಡಿದ್ದಾರೆ. ಅದೇ 'ದಚ್ಚು ದಿವು' ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಹಲವು ರೀಲ್ಸ್ಗಳು ಪತ್ತೆಯಾಗಿವೆ. ಸಂಚಾರ ಪೊಲೀಸರಿಗೆ ಈ ಹಿಂದೆ ₹ 17,500 ದಂಡವನ್ನು ಪಾವತಿಸಿದ್ದರು. ಆದರೆ ಈಗ ಹೊಸ ಉಪಾಯದಿಂದ ರೀಲ್ಸ್ ಮಾಡುತ್ತಿದ್ದು, ನಂಬರ್ ಪ್ಲೇಟ್ ಕಾಣಿಸದ ರೀತಿಯಲ್ಲಿ ಎಚ್ಚರ ವಹಿಸುತ್ತಿದ್ದಾರೆ. ಇದನ್ನು ಮಟ್ಟ ಹಾಕುವುದು ಹೇಗೆ ಎಂದು ಪೊಲೀಸರು ಚಿಂತನೆ ನಡೆಸಿದ್ದಾರೆ.