ಶೀಘ್ರದಲ್ಲೇ ವಾಪಸ್ ಬರುತ್ತೇನೆ ಎಂದ ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್ ಅರ್ಹತೆ ಇದ್ದರೂ ಭಾರತ ತಂಡದಲ್ಲಿ ಅವಕಾಶ ಪಡೆಯಲು ಹೆಣಗಾಡುತ್ತಿರುವ ಆಟಗಾರ. 2022ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ತಂಡದಲ್ಲಿ ಸ್ಥಾನ ಪಡೆದರೂ, ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲಿಲ್ಲ.
ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅವರು ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾದರು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಸಂಜು ಸ್ಯಾಮ್ಸನ್ ಮೊಣಕಾಲಿಗೆ ಗಾಯಮಾಡಿಕೊಂಡರು. ಬೌಂಡರಿ ರಕ್ಷಣೆ ಮಾಡುವ ಸಂದರ್ಭದಲ್ಲಿ ಅವರ ಎಡ ಮೊಣಕಾಲಿಗೆ ಗಾಯವಾಯಿತು. ನಂತರ ಅವರು ಇಡೀ ಸರಣಿಯಿಂದ ಹೊರಗುಳಿಯಬೇಕಾಯಿತು. ಅವರ ಬದಲಾಗಿ ಜಿತೇಶ್ ಶರ್ಮಾ ತಂಡಕ್ಕೆ ಸೇರ್ಪಡೆಯಾದರು.
ಮೊದಲೇ ಹೆಚ್ಚಿನ ಅವಕಾಶ ಪಡೆಯದ ಸಂಜು ಸ್ಯಾಮ್ಸನ್ ಅವಕಾಶ ಸಿಕ್ಕಾಗ ಈ ರೀತಿ ಗಾಯಗೊಂಡು ಸರಣಿಯಿಂದ ಹೊರಗುಳಿದಿದ್ದು ದುರದೃಷ್ಟಕರ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಭಾರತ ತಂಡದಿಂದ ಹೊರಗುಳಿದ ನಂತರ ಸಂಜು ಸ್ಯಾಮ್ಸನ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದು ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾರೆ.
ಸಂಜು ಸ್ಯಾಮ್ಸನ್‌ಗೆ ವಿಶ್ರಾಂತಿ
ಮೊಣಕಾಲಿಗೆ ಗಾಯಮಾಡಿಕೊಂಡ ಬಳಿಕ ಬಿಸಿಸಿಐ ವೈದ್ಯಕೀಯ ತಂಡ ಅವರನ್ನು ಸ್ಕ್ಯಾನ್‌ಗೆ ಒಳಪಡಿಸಿದ್ದಾರೆ. ವಿಶ್ರಾಂತಿ ಮತ್ತು ಪುನರ್ವಸತಿಗಾಗಿ ಅವರಿಗೆ ಸಲಹೆ ನೀಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಸಂಜು ಸ್ಯಾಮ್ಸನ್ ಗಾಯದ ಬಗ್ಗೆ ಆತಂಕಕ್ಕೆ ಒಳಗಾಗಿದ್ದ ಅಭಿಮಾನಿಗಳೊಗೆ ಸಂಜು ಸ್ಯಾಮ್ಸನ್ ಖುಷಿಯ ಸುದ್ದಿ ನೀಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದು, "ಎಲ್ಲವೂ ಸರಿಯಾಗಿದೆ (All Is Well)" ಎಂದು ಹೇಳಿದ್ದಾರೆ. ಅಲ್ಲದೆ ಶೀಘ್ರದಲ್ಲೇ ನಿಮ್ಮನ್ನು ನೋಡುತ್ತೇನೆ ಎಂದು ಹೇಳುವ ಮೂಲಕ ಆದಷ್ಟು ಬೇಗನೆ ಕ್ರಿಕೆಟ್‌ಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏಕದಿನ ತಂಡಕ್ಕೆ ಆಯ್ಕೆಯಾಗದ ಸಂಜು
ಭಾರತ ತಂಡ 2023ರ ಏಕದಿನ ವಿಶ್ವಕಪ್‌ಗೆ ತಯಾರಿ ಆರಂಭಿಸಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಸ್ಯಾಮ್ಸನ್‌ರನ್ನು ಆಯ್ಕೆ ಮಾಡಿದ್ದರೂ, ಏಕದಿನ ಸರಣಿಗಾಗಿ ಅವರನ್ನು ಕೈ ಬಿಡಲಾಗಿದೆ. ಬಿಸಿಸಿಐ ಈಗಾಗಲೇ 20 ಆಟಗಾರರ ಹೆಸರನ್ನ ಏಕದಿನ ವಿಶ್ವಕಪ್‌ಗಾಗಿ ಶಾರ್ಟ್‌ಲಿಸ್ಟ್ ಮಾಡಿದ್ದು, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡದೆ, ಸ್ಯಾಮ್ಸನ್ ವಿಶ್ವಕಪ್ ತಂಡದಲ್ಲಿ ಇರುವುದಿಲ್ಲ ಎನ್ನುವ ಸೂಚನೆ ನೀಡಿದೆ. ಬಿಸಿಸಿಐನ ಈ ನಡೆ ಬಗ್ಗೆ ಅಭಿಮಾನಿಗಳು, ಕೆಲವು ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.