ಅಂದು ಗುಮಾಸ್ತೆ, ಇಂದು ಜಡ್ಜ್

ಅಂದು ಗುಮಾಸ್ತೆ, ಇಂದು ಜಡ್ಜ್

ಹುಣಸೂರು: ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಗುಮಾಸ್ತೆಯಾಗಿರುವ ಮಹಿಳಾ ವಕೀಲರೊಬ್ಬರು ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ.

ಮೈಸೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಗುಮಾಸ್ತೆಯಾಗಿರುವ ಹುಣಸೂರು ತಾಲೂಕಿನ ಮರದೂರು ಹೊಸೂರು ಗ್ರಾಮದ ಎಚ್‌.ಆರ್‌.

ಹೇಮಾ ಸಾಧಕ ಮಹಿಳೆ.

ಹುಣಸೂರು ಮತ್ತು ಮೈಸೂರಿನಲ್ಲಿ ವಕೀಲ ವೃತ್ತಿಯನ್ನು ನಡೆಸುತ್ತಿದ್ದ ಎಚ್‌.ಆರ್‌.ಹೇಮಾ ಕಳೆದ 5 ವರ್ಷಗಳ ಹಿಂದೆ ಪ್ರಥಮ ದರ್ಜೆ ಗುಮಾಸ್ತರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ವಕೀಲ ವೃತ್ತಿ ಬಿಟ್ಟು ಸರಕಾರಿ ಸೇವೆಗೆ ಆಯ್ಕೆಯಾಗಿ ಮೈಸೂರಿನ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಆಗ ನ್ಯಾಯಾಧೀಶರಾಗಬೇಕೆಂಬ ಹಂಬಲದಿಂದ ಪರೀಕ್ಷೆ ಎದುರಿಸಿ ಎರಡನೇ ಪ್ರಯತ್ನದಲ್ಲಿ ತೇರ್ಗಡೆ ಹೊಂದಿ ಇದೀಗ ಸಿವಿಲ್‌ ಜಡ್ಜ್ ಹುದ್ದೆಗೆ ಆಯ್ಕೆಯಾಗಿದ್ದಾರೆ