ದೃಶ್ಯಂ” ಸ್ಟೈಲ್‌ನಲ್ಲಿ ಹುಗಿದಿದ್ದ “ಅಖಿಲ ಜೈನ್” ಶವ ಪತ್ತೆ

ದೃಶ್ಯಂ” ಸ್ಟೈಲ್‌ನಲ್ಲಿ ಹುಗಿದಿದ್ದ “ಅಖಿಲ ಜೈನ್” ಶವ ಪತ್ತೆ

ಕಲಘಟಗಿ: ತಂದೆಯ ಸುಫಾರಿಯಿಂದಲೇ ಹತ್ಯೆಗೊಳಗಾಗಿದ್ದ ಯುವಕನ ಶವ ಕೊನೆಗೂ ತಾಲೂಕಿನ ದೇವಿಕೊಪ್ಪದ ಬಳಿಯ ನಿರ್ಮಾಣ ಹಂತದ ಮನೆಯ ಹಿಂಭಾಗದಲ್ಲಿ ಸಿಕ್ಕಿದ್ದು, ಹುಬ್ಬಳ್ಳಿ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಉದ್ಯಮಿ ಭರತ ಜೈನ್ ಅಲಿಯಾಸ ಮಹಾಜನಶೆಟ್ರು ಎಂಬುವವರೇ ಹಳೇಹುಬ್ಬಳ್ಳಿಯ ಮೂವರಿಗೆ ಸುಫಾರಿ ನೀಡಿ ಸ್ವಂತ ಮಗನನ್ನ ಕೊಲೆ ಮಾಡಿಸಿದ್ದರು. ಆದರೆ, ಕಾಣೆಯಾಗಿದ್ದಾನೆಂದು ಸಹೋದರನಿಂದ ದೂರನ್ನ ಕೇಶ್ವಾಪುರ ಠಾಣೆಯಲ್ಲಿ ದಾಖಲು ಮಾಡಿಸಿದ್ದರು.

ಇದಾದ ಮೇಲೆ ಇದು ಕಾಣೆಯಾದ ಕೇಸಲ್ಲ, ಕಾಣೆಯಾಗಿಸಿದ ಪ್ರಕರಣವೆಂದು ಪೊಲೀಸರು ಪತ್ತೆ ಹಚ್ಚಿದ್ದರು. ಆದರೆ, ಶವ ಮಾತ್ರ ಸಿಕ್ಕಿರಲಿಲ್ಲ. ಕಳೆದ 48 ಗಂಟೆಗಳ ನಂತರ ಶವ ಸಿಕ್ಕಿದ್ದು, ಹೊರಗೆ ತೆಗೆಯುತ್ತಿದ್ದಾರೆ.

ಹುಬ್ಬಳ್ಳಿಯ ಪೊಲೀಸರಿಗೆ ಧಾರವಾಡ ಜಿಲ್ಲಾ ಪೊಲೀಸರು ಕೂಡಾ ಸಾಕಷ್ಟು ಸಹಕಾರ ನೀಡಿದ ಪರಿಣಾಮ, ಪ್ರಕರಣವನ್ನ ಪತ್ತೆ ಹಚ್ಚಲಾಗಿದೆ. ಪ್ರಮುಖ ಆರೋಪಿಯ ಪತ್ತೆಗಾಗಿ ಪೊಲೀಸರು ಮತ್ತಷ್ಟು ಹುಡುಕಾಟ ಆರಂಭಿಸಬೇಕಿದೆ.