ಗ್ರಾಮಪಂಚಾಯಿತಿ ಖಾಲಿ ಸ್ಥಾನಗಳು ಹಾಗೂ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆಯ ಅಧಿಸೂಚನೆ ಪ್ರಕಟ

ದಾವಣಗೆರೆ : ದಾವಣಗೆರೆ ಜಿಲ್ಲೆಯ ದಾವಣಗೆರೆ,ಹರಿಹರ,ಚನ್ನಗಿರಿ,ಹೊನ್ನಾಳಿ,ಜಗಳೂರು ಹಾಗೂ ನ್ಯಾಮತಿ ತಾಲ್ಲೂಕಿನ ಈ ಕೆಳಕಂಡ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾಗದೆ ಖಾಲಿ ಇರುವ ಹಾಗೂ ತೆರವಾಗಿರುವ ಸದಸ್ಯರ ಸ್ಥಾನಗಳನ್ನು ತುಂಬಲು ಉಪಚುನಾವಣೆ ನಡೆಸಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವೇಳಾಪಟ್ಟಿ ನಿಗದಿಪಡಿಸಿರುತ್ತಾರೆ.
ವೇಳಾಪಟ್ಟಿಯನ್ವಯ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಡಿ.17 ಕೊನೆಯ ದಿನವಾಗಿದೆ. ಡಿ.18 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಡಿ.20 ಕೊನೆಯ ದಿನ. ಮತದಾನ ಅವಶ್ಯವಿದ್ದರೆ ಮತದಾನವನ್ನು ಡಿ.27 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಡಿ.30 ರೊಳಗೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಕ್ಷೇತ್ರ ಹಾಗೂ ಮೀಸಲಾತಿ ವಿವರ ಇಂತಿದೆ.
ದಾವಣಗೆರೆ ತಾಲ್ಲೂಕು : ಕಡ್ಲೆಬಾಳು ಗ್ರಾಮ ಪಂಚಾಯತಿ, ಮಾಳಗೊಂಡನಹಳ್ಳಿ (ಅನುಸೂಚಿತ ಜಾತಿ,) ದೊಡ್ಡಬಾತಿ ಗ್ರಾಮ ಪಂಚಾಯತಿ, ದೊಡ್ಡಬಾತಿ, ಹಿಂದುಳಿದ ವರ್ಗ 'ಅ'(ಮಹಿಳೆ), ಗೋಪನಾಳ್‍ಗ್ರಾಮ ಪಂಚಾಯತಿ, ಯರವನಾಗ್ತಿಹಳ್ಳಿ, (ಸಾಮಾನ್ಯ)
ಹರಿಹರ ತಾಲ್ಲೂಕು : ಎಳೆಹೊಳೆ ಗ್ರಾಮ ಪಂಚಾಯತಿ, ಮಳಲಹಳ್ಳಿ (ಅನುಸೂಚಿತ ಪಂಗಡ.)
ಚನ್ನಗಿರಿ ತಾಲ್ಲೂಕು : ಗುಡ್ಡದಕೊಮಾರನಹಳ್ಳಿ ಗ್ರಾಮ ಪಂಚಾಯತಿ, ಎನ್ ಗಾಣದಕಟ್ಟೆ, (ಅನುಸೂಚಿತ ಪಂಗಡ.) ತಣಿಗೆರೆ ಗ್ರಾಮ ಪಂಚಾಯತಿ, ಮರಡಿ, (ಸಾಮಾನ್ಯ). ಕರೇಕಟ್ಟೆ ಗ್ರಾಮ ಪಂಚಾಯತಿ, ಕರೇಕಟ್ಟೆ, ಅನುಸೂಚಿತ ಪಂಗಡ (ಮಹಿಳೆ). ಅಗರಬನ್ನಿಹಟ್ಟಿ ಗ್ರಾಮ ಪಂಚಾಯತಿ, ಅಗರ ಬನ್ನಿಹಟ್ಟಿ, ಹಿಂದುಳಿದ ವರ್ಗ 'ಅ'(ಮಹಿಳೆ)
ಜಗಳೂರು ತಾಲ್ಲೂಕು : ದೇವಿಕೆರೆ ಗ್ರಾಮ ಪಂಚಾಯತಿ, ಶೆಟ್ಟಿಗೊಂಡನಹಳ್ಳಿ, ಅನುಸೂಚಿತ ಪಂಗಡ(ಮಹಿಳೆ).
ಹೊನ್ನಾಳಿ ತಾಲ್ಲೂಕು : ಹಿರೇಗೋಣಿಗೆರೆ ಗ್ರಾಮ ಪಂಚಾಯತಿ, ಹಿರೇಗೋಣಿಗೆರೆ, ಅನುಸೂಚಿತ ಪಂಗಡ(ಮಹಿಳೆ), ಮುಕ್ತೇನಹಳ್ಳಿ ಗ್ರಾಮ ಪಂಚಾಯತಿ, ಕೆಂಗಲಹಳ್ಳಿ, ಸಾಮಾನ್ಯ (ಮಹಿಳೆ).
ನ್ಯಾಮತಿ ತಾಲ್ಲೂಕು :ಗುಡ್ಡೇಹಳ್ಳಿ ಗ್ರಾಮ ಪಂಚಾಯತಿ, ಜೀನಹಳ್ಳಿ -1 (1) ಅನುಸೂಚಿತ ಜಾತಿ, (2)ಸಾಮಾನ್ಯ(ಮಹಿಳೆ), ಜೀನಹಳ್ಳಿ-2 (1) ಅನುಸೂಚಿತ ಪಂಗಡ(ಮಹಿಳೆ) (2)ಸಾಮಾನ್ಯ, (3)ಸಾಮಾನ್ಯ(ಮಹಿಳೆ) ವಡೇರಹತ್ತೂರು ಗ್ರಾಮ ಪಂಚಾಯತಿ, ಕೂಗೋನಹಳ್ಳಿ, (ಸಾಮಾನ್ಯ.). ಅಭ್ಯರ್ಥಿಗಳ ಮೀಸಲಾತಿ ನಿಗದಿಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.