ರೈಲು ಮಾರ್ಗ ಬದಲಿಗೆ ರೈತರ ಆಗ್ರಹ

ರೈಲು ಮಾರ್ಗ ಬದಲಿಗೆ ರೈತರ ಆಗ್ರಹ

ಧಾರವಾಡ: ಬೆಳಗಾವಿಗೆ ಕಿತ್ತೂರು ಮಾರ್ಗವಾಗಿ ನಿರ್ಮಾಣಗೊಳ್ಳುತ್ತಿರುವ ಹೊಸ ರೈಲ್ವೆ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುತ್ತಿರುವ ರೈತರ ಜಮೀನಿನ ಮೋಜಣಿ ಸಮರ್ಪಕವಾಗಿ ಆಗಿಲ್ಲ ಹಾಗೂ ಅಳತೆಗಿಂತ ಹೆಚ್ಚಿನ ಜಮೀನು ಭೂಸ್ವಾಧೀನವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ ಬೆಳಗಾವಿ ಜಿಲ್ಲೆಯ ರೈತರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂ ಸ್ವಾಧೀನಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.

'ರೈಲು ಮಾರ್ಗಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಜಮೀನುಗಳು ಅತ್ಯಂತ ಫಲವತ್ತಾದವು. ವರ್ಷದಲ್ಲಿ ಮೂರು ಬೆಳೆ ಬೆಳೆಯಲಾಗುತ್ತಿದೆ. ಈ ಜಮೀನುಗಳಲ್ಲಿ ಬಾವಿ, ಕೊಳವೆಬಾವಿ, ಪೈಪ್‌ಲೈನ್‌ಗಳು ಇವೆ. ಇಲ್ಲಿನ ಪ್ರತಿಯೊಬ್ಬ ರೈತರೂ ರಾಸುಗಳನ್ನು ಸಾಕಿದ್ದಾರೆ. ಅವುಗಳಿಗೆ ಅಗತ್ಯವಿರುವ ಮೇವನ್ನು ಇಲ್ಲಿ ಬೆಳೆಯುತ್ತಿದ್ದಾರೆ. ಹೊಲವೇ ಹೋದರೆ, ರೈತರ ಜೀವನೋಪಾಯ ಕಷ್ಟವಾಗಲಿದೆ' ಎಂದು ಅಳಲು ತೋಡಿಕೊಂಡರು.

'ಕಣವಿಕರುವಿನಕೊಪ್ಪ, ನಾಗೇನಟ್ಟಿ, ನಂದಿಹಳ್ಳಿ ಗ್ರಾಮಗಳು ಗುಡ್ಡದ ಮೂಲಕ ರೈಲ್ವೆ ಮಾರ್ಗ ಸಾಗಬಹುದು. ಅಲ್ಲಿರುವ ಜಮೀನುಗಳನ್ನು ನೀಡಲು ಸಿದ್ಧರಿದ್ದೇವೆ. ಹೀಗಾಗಿ ರೈತರ ಮನವಿಯನ್ನು ಪುರಸ್ಕರಿ' ಎಂದು ಮನವಿ ಸಲ್ಲಿಸಿದರು.