ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಶೀತ ಅಲೆಯ ಸ್ಥಿತಿಗತಿ ಇಲ್ಲಿದೆ

ಕರ್ನಾಟಕದ ಹಲವೆಡೆ ಚಳಿ ಹೆಚ್ಚಾಗುತ್ತಲೇ ಇದ್ದು ದಟ್ಟ ಮಂಜು ಆವರಿಸಿದೆ. ಹೀಗಾಗಿ ಕೆಲ ದಿನಗಳಿಂದ ಕರ್ನಾಟಕದಲ್ಲಿ ತಾಪಮಾನ ಕುಸಿಯುತ್ತಿದೆ. ಉತ್ತರ ಕರ್ನಾಟಕ ಸೇರಿದಂತೆ ಬೆಂಗಳೂರಿನ ಹಲವೆಡೆ ಶೀತ ಅಲೆ ಅಧಿಕವಾಗಿದೆ.
ಬೆಂಗಳೂರಿನಲ್ಲಿಂದು ಹಲವೆಡೆ ದಟ್ಟ ಮಂಜು ಆವರಿಸಿದ್ದು ರಾಜ್ಯದ ಕೆಲ ಜಿಲ್ಲೆಗಳಲ್ಲಿ ಹಳದಿ ಎಚ್ಚರಿಕೆಯನ್ನು ನೀಡಲಾಗಿದೆ.
ಶೀತ ಮಾರುತಗಳು ಅಪ್ಪಳಿಸುವ ಕಾರಣದಿಂದಾಗಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಚಳಿ ವಾತಾವರಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಜೊತೆಗೆ ದೇಹ ಪೂರ್ತಿ ಕವರ್ ಮಾಡುವ ಬೆಚ್ಚಿಗಿನ ಬಟ್ಟೆಗಳು, ಸಾಧ್ಯವಾದಾಗ ಮನೆಯೊಳಗೆ ಇರುವಂತೆ ಸೂಚಿಸಲಾಗಿದೆ.
ದೆಹಲಿಯಲ್ಲಿ ದಟ್ಟ ಮಂಜು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ದೆಹಲಿಯಲ್ಲಿ ಶೀತ ಅಲೆ ಕಣ್ಣಾಮುಚ್ಚಾಲೆ ಆಟವಾಡಿದಂತೆ ಕಾಣುತ್ತಿದೆ. ಒಂದು ದಿನ ಮಂಜಿನ ವಾತವಾರಣ ಕಡಿಮೆ ಇದ್ದರೆ ಮತ್ತೊಂದು ದಿನ ಚಳಿಯ ಅಲೆ ಅಧಿಕವಾಗಿರುತ್ತದೆ. ಹವಾಮಾನ ಇಲಾಖೆ ಪ್ರಕಾರ ಜನವರಿ 15ರಿಂದ 19ರ ನಡುವೆ ಉತ್ತರ ಭಾರತದಲ್ಲಿ ಮೂಳೆ ಕೊರೆಯುವ ಚಳಿ ಕಾಣಿಸಲಿದೆ.