12 ದಿನಗಳಲ್ಲಿ 5.4 ಸೆಂ.ಮೀ ಮುಳುಗಿದ ಜೋಶಿಮಠ; ಇಸ್ರೋದಿಂದ ಚಿತ್ರ ಬಿಡುಗಡೆ

ನವದೆಹಲಿ: 2022 ರ ಏಪ್ರಿಲ್ & ನವೆಂಬರ್ ನಡುವೆ ಏಳು ತಿಂಗಳಲ್ಲಿ ಜೋಶಿಮಠ 9 ಸೆಂ.ಮೀ ಕುಸಿದಿದ್ದರೆ, ಡಿ.2020 & ಜನವರಿ 2023 ರ ನಡುವೆ 12 ದಿನಗಳಲ್ಲಿ 5.4 ಸೆಂ.ಮೀ ಕುಸಿದಿದೆ ಎಂದು ವರದಿಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ರಾಷ್ಟ್ರೀಯ ದೂರಸಂವೇದಿ ಕೇಂದ್ರ(ISRO)ವು ಜೋಶಿಮಠದ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. 2,180 ಮೀಟರ್ ಎತ್ತರದಲ್ಲಿ ಜೋಶಿಮಠ ಔಲಿ ರಸ್ತೆಯ ಬಳಿ ಮುಳುಗುವಿಕೆಯ ವಲಯವಿದೆ ಎಂದು ತಿಳಿಸಿದೆ.