ಬೆಂಗಳೂರಿನ 86 ರೌಡಿಶೀಟರ್ ಮನೆಗಳ ಮೇಲೆ ಸಿಸಿಬಿ ಪೊಲೀಸರ ದಾಳಿ
ಬೆಂಗಳೂರು: ರೌಡಿಸಂನಲ್ಲಿ ಆಕ್ಟೀವ್ ಆಗಿರುವ 86 ರೌಡಿಶೀಟರ್ ಮನೆಗಳ ಮೇಲೆ ತಡರಾತ್ರಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಎಲ್ಲಾ ವಿಭಾಗಗಳ ಠಾಣಾ ವ್ಯಾಪ್ತಿಗಳಲ್ಲಿ ಐವರು ಎಸಿಪಿ, 20 ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ನಗರದ ಪ್ರಮುಖ ರೌಡಿಶೀಟರ್‌ಗಳ ಮನೆಗಳ ಮೇಲೆ ರೇಡ್ ನಡೆಸಿ CCB ಪರಿಶೀಲನೆ ನಡೆಸಿದೆ. ರೇಡ್ ವೇಳೆ ರೌಡಿಶೀಟರ್‌ಗಳಾದ ಕೋತಿರಾಮ, ಆರ್.ಟಿ.ನಗರದ ವೆಂಕಟೇಶ್ ಸೇರಿ 26 ರೌಡಿಶೀಟರ್‌ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.