ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಗುಡ್ ನ್ಯೂಸ್: ಇಂದಿನಿಂದ 'ಕೆಆರ್ ಪುರಂ-ವೈಟ್ ಫೀಲ್ಡ್' ನಡುವೆ ಕೊನೆಯ ಹಂತದ ಪ್ರಾಯೋಗಿಕ ಸಂಚಾರ, ಶೀಘ್ರವೇ ಜನಸೇವೆಗೆ ಲೋಕಾರ್ಪಣೆ

ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಗುಡ್ ನ್ಯೂಸ್: ಇಂದಿನಿಂದ 'ಕೆಆರ್ ಪುರಂ-ವೈಟ್ ಫೀಲ್ಡ್' ನಡುವೆ ಕೊನೆಯ ಹಂತದ ಪ್ರಾಯೋಗಿಕ ಸಂಚಾರ, ಶೀಘ್ರವೇ ಜನಸೇವೆಗೆ ಲೋಕಾರ್ಪಣೆ

ಬೆಂಗಳೂರು: ಇಂದಿನಿಂದ ಕೆ ಆರ್ ಪುರಂ ಹಾಗೂ ವೈಟ್ ಫೀಲ್ಡ್ ನಡುವೆ ಮೆಟ್ರೋ ಪ್ರಾಯೋಗಿಕ ಸಂಚಾರ ಆರಂಭಗೊಳ್ಳಲಿದೆ. ಈ ಪ್ರಾಯೋಗಿಕ ಸಂಚಾರ ಮೂರು ದಿನಗಳ ಕಾಲ ಸುರಕ್ಷತಾ ಆಯುಕ್ತರ ನೇತೃತ್ವದಲ್ಲಿ ಸೇಫ್ಟಿ ಕಮೀಷನ್ ನಡೆಸಲಿದೆ. ಈ ಬಳಿಕ ಮಾರ್ಚ್ 15ರ ಒಳಗಾಗಿ ಜನಸೇವೆಗೆ ಲೋಕಾರ್ಪಣೆಗೊಳ್ಳೋ ಸಾಧ್ಯತೆ ಇದೆ.

ಹೌದು ಇಂದಿನಿಂದ ಕೆ ಆರ್ ಪುರಂ ಹಾಗೂ ವೈಟ್ ಫೀಲ್ಡ್ ನಡುವಿನ ನಮ್ಮ ಮೆಟ್ರೋ ಪ್ರಾಯೋಗಿಕ ಸಂಚಾರ ಆರಂಭಗೊಳ್ಳಲಿದೆ. ಮೂರು ದಿನಗಳ ಕಾಲ ಸುರಕ್ಷತಾ ಆಯುಕ್ತರ ನೇತೃತ್ವದಲ್ಲಿ ಸೇಫ್ಟಿ ಕಮೀಷನ್ ನಡೆಸಲಿದೆ. ಈ ವೇಳೆಯಲ್ಲಿ ಮೆಟ್ರೋ ಸಿಗ್ನಲ್, ಟ್ರ್ಯಾಕ್, ರೈಲಿನ ಸಂಚಾರ, ನಿಲ್ದಾಣಗಳ ನಿರ್ವಹಣೆ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಸೇಫ್ಟಿ ಕಮೀಷನ್ ನಡೆಸುವಂತ ಪ್ರಾಯೋಗಿಕ ಪರೀಕ್ಷಾ ಸಂಚಾರದ ವರದಿಯನ್ನು ಒಂದು ವಾರದಲ್ಲಿ ಸಲ್ಲಿಸಲಿದೆ. ಈ ವರದಿಯನ್ನು ಆಧರಿಸಿ, ಪರೀಕ್ಷಾರ್ಥ ಸಂಚಾರದ ವೇಳೆ ಯಾವುದೇ ಲೋಪ ಇಲ್ಲವೆಂದು ಕಂಡು ಬಂದಲ್ಲಿ, ಬಿಎಂ ಆರ್ ಸಿಎಲ್ ನಿಂದ ಮೆಟ್ರೋ ಸಂಚಾರ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಮಾಡಲಿದೆ.