14 ತಿಂಗಳಿನಿAದ ಕಾಣೆಯಾದ ವ್ಯಕ್ತಿ ಮರಳಿ ಗೂಡಿಗೆ | Bidar |

14 ತಿಂಗಳಿನಿಂದ ಮನೆಯಿಂದ ಕಾಣೆಯಾದ ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರ ಕಾಳಜಿಯಿಂದ ಮರಳಿಗೂಡು ಸೇರಿದ ಅಪರೂಪದ ಘಟನೆ ನಗರದಲ್ಲಿ ನಡೆದಿದೆ. ಮೂಲತಃ ತಮಿಳುನಾಡಿನ ಸೇಲಂ ಜಿಲ್ಲೆಯ ಯಡಪ್ಪಾಡಿಯವರಾದ ತಿರುಮಲ ಪಲನಿಸ್ವಾಮಿ ಕಾಣೆಯಾಗಿದ್ದರು. ಆತ ಜೀವಂತವಾಗಿಲ್ಲ ಎಂದೇ ಮನೆಯವರು ಭಾವಿಸಿದ್ದರು. ಬೀದರ್ ಜಿಲ್ಲಾಧಾರಿ ಕಚೇರಿಯಿಂದ ಫೋನ್ ಬಂದಾಗಲೇ ಕುಟುಂಬದವರಿಗೆ ತಿರುಮಲ ಬೀದರ್‍ನಲ್ಲಿ ಜೀವಂತವಾಗಿದ್ದಾನೆ ಎಂಬುದು ಗೊತ್ತಾಗಿದೆ. ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಆಗಸ್ಟ್ 21ರಂದು ಬಸವಕಲ್ಯಾಣ ಪ್ರವಾಸದಲ್ಲಿದ್ದಾಗ ಬೀದರ್ ಮನ್ನಾಖೆಳ್ಳಿ ಹೆದ್ದಾರಿಯಲ್ಲಿ ತಿರುಮಲ ಕಣ್ಣಿಗೆ ಬಿದ್ದಿದ್ದಾರೆ. ಆಗ ಮಾತನಾಡಿಸಿ ಆತನ ಆರೋಗ್ಯ ತಪಾಸಣೆ ನಡೆಸಲು ಕೂಡಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಿರುಮಲ ಅವರೊಂದಿಗೆ ತಮಿಳಿನಲ್ಲಿ ಮಾತನಾಡಿದ ಸ್ಥಳಿಯ ರಾಜು ಅವರು ತಿರುಮಲ ಅವರಿಂದ ಮಾಹಿತಿ ಕಲೆ ಹಾಕಿದ್ದಾರೆ. ಇವರನ್ನು ಕರೆದೊಯ್ಯಲು ಅವರ ಅಣ್ಣನ ಮಗನಾದ ದಿನೇಶ ಕೃಷ್ಣ ಅವರು ಆಗಸ್ಟ್ 23ರಂದು ಬೀದರ್‍ಗೆ ಬಂದು ತಿರುಮಲ ಅವರನ್ನು ಮರಳಿ ಸೇರಿಸಿದ್ದಕ್ಕಾಗಿ ಜಿಲ್ಲಾಧಿಕಾರಿಗಳನ್ನು ಖುದ್ದು ಅವರ ಕಚೇರಿಯಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.