ಸಿಡಿಲು ಬಡಿದು ಶೆಡ್ ಭಸ್ಮಾ
ಸಿಡಿಲು ಬಡಿದು ಟ್ರ್ಯಾಕ್ಟರ್ ಶೆಡ್ ಭಸ್ಮ ಆದ ಘಟನೆ ತರೀಕೆರೆ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ನಡೆದಿದೆ. ಸಿಡಿಲಿನಿಂದ ಧಗಧಗಿಸಿದ ಕರುಣಾ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್ ಶೆಡ್ ಸಿಡಿಲು ಬಡಿದು ಭಸ್ಮ ಆದ ಘಟನೆ ನಡೆದಿದೆ. ಇನ್ನು ಟ್ರ್ಯಾಕ್ಟರ್, ಅಡಿಕೆ ಮೆಷಿನ್, 15 ಕ್ವಿಂಟಾಲ್ ಅಡಿಕೆ ಬೆಂಕಿಗಾಹುತಿ ಆಗಿದೆ. ಈ ಸಿಡಿಲಾಘಾತದಿಂದ ಬರೋಬ್ಬರಿ 25 ಲಕ್ಷಕ್ಕೂ ಅಧಿಕ ನಷ್ಟ ಎದುರಾಗಿದೆ. ಇದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕುನಲ್ಲಿ ನಡೆದ ಘಟನೆ ಇದಾಗಿದೆ.