ಬೆಂಗಳೂರಿನ ಯಲಹಂಕದಲ್ಲಿ ಚಿರತೆ ಪ್ರತ್ಯಕ್ಷ: ಚಿರತೆ ದಾಳಿಗೆ ಕರು ಬಲಿ

ಬೆಂಗಳೂರು: ನಗರದ ಕೆಲವೆಡೆ ಕಾಣಿಸಿಕೊಂಡಿದ್ದಂತ ಚಿರತೆ, ಈಗ ಯಲಹಂಕದಲ್ಲಿ ಪ್ರತ್ಯಕ್ಷವಾಗಿದೆ. ಇಲ್ಲಿನ ದಾಸನಪುರದಲ್ಲಿ ಕರುವೊಂದನ್ನು ಕೊಂದು ತಿಂದಿರೋದಾಗಿ ತಿಳಿದು ಬಂದಿದೆ.
ಈಗಾಗಲೇ ಯಶವಂತಪುರ, ಜ್ಞಾನಭಾರತಿ ಸೇರಿದಂತೆ ವಿವಿಧೆಡೆ ಚಿರತೆ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿಸಿತ್ತು.
ಫೆ.19ರಂದು ನಡೆದಿರುವಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಐದು ದಿನಗಳ ಹಿಂದಷ್ಟೇ ಯಲಹಂಕ ಸಮೀಪದ ರಾಮಾಂಜನೇಯ ಲೇಔಟ್ ನಲ್ಲಿ ಎರಡು ಚಿರತೆ ಪ್ರತ್ಯಕ್ಷವಾಗಿದ್ದವು. ಈ ಘಟನೆಯ ಬಳಿಕ ಚಿರತೆ ಕರುವನ್ನು ತಿಂದಿರೋದರಿಂದ, ಜನರಲ್ಲಿ ಆತಂಕ ಉಂಟಾಗಿದೆ. ಚಿರತೆ ಸೆರೆ ಹಿಡಿಯುವಂತೆ ಜನರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.