ಹಿಂದುಗಳಿಗೆ ದೇಗುಲಗಳ ನಿರ್ವಹಣೆ ಅಧಿಕಾರ: ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಒತ್ತಾಯ

ಹಿಂದುಗಳಿಗೆ ದೇಗುಲಗಳ ನಿರ್ವಹಣೆ ಅಧಿಕಾರ: ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಒತ್ತಾಯ

ಡುಪಿ: ದೇಗುಲಗಳ ನಿರ್ವಹಣೆಯನ್ನು ಸರಕಾರ ನಡೆಸದೆ ಹಿಂದುಗಳಿಗೆ ವಹಿಸಿಕೊಡಬೇಕು. ಗೋ ಹತ್ಯಾ ನಿಷೇಧ ಕಾನೂನು ಸಮರ್ಪಕ ಜಾರಿ ತರುವುದರ ಜೊತೆಗೆ ಗೋ ಸಂರಕ್ಷಣೆಗೆ ಪೂರಕ ಯೋಜನೆಗಳಿಗೆ ನೆರವು ನೀಡಬೇಕು. ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ ನೀಡಬೇಕು.

ದೇವಸ್ಥಾನಗಳ ಭೂಮಿ ಅತಿಕ್ರಮಣ ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಕರಾವಳಿಯ ಸಾಧು ಸಂತರ ಸಮಾಲೋಚನೆ ಸಭೆಯ ಬಳಿಕ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜಕ್ಕೆ ಒಳಿತಾಗುವ ಬೇಡಿಕೆಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರಿಗೆ ಸಲ್ಲಿಸಿದ್ದೇವೆ. ಮುಂದೆ ಅವರು ಅದನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶ್ರೀಗಳು, ಇನ್ನೊಂದು ಪಕ್ಷದವರು ಬಂದರು ಕೂಡ ನಾವು ಇದೇ ವಿಚಾರವನ್ನು ಅವರ ಮುಂದೆ ಇಡುತ್ತೇವೆ. ನಮಗೆ ಪಕ್ಷ ಮುಖ್ಯ ಅಲ್ಲ. ಸಮಾಜಕ್ಕೆ ಬೇಕಾಗಿರುವುದನ್ನು ನಾವು ಯಾವುದೇ ಸರಕಾರ, ಜನಪ್ರತಿನಿಧಿಗಳು ಬಂದರು ಕೂಡ ಈ ರೀತಿಯ ವಿಚಾರಗಳನ್ನು ಅವರ ಮುಂದೆ ಕೂಡ ಇಡುತ್ತೇವೆ ಎಂದು ಹೇಳಿದರು.