ನವದೆಹಲಿ:ನೀತಿ ಆಯೋಗ ಸಿಇಒ ಆಗಿ ಸುಬ್ರಹ್ಮಣ್ಯ ನೇಮಕ

ನವದೆಹಲಿ:ನೀತಿ ಆಯೋಗ ಸಿಇಒ ಆಗಿ ಸುಬ್ರಹ್ಮಣ್ಯ ನೇಮಕ

ವದೆಹಲಿ: ನೀತಿ ಆಯೋಗದ ಸಿಇಒ ಆಗಿ ಸುಬ್ರಹ್ಮಣ್ಯ ಅವರನ್ನು ನೇಮಕ ಮಾಡುವುದಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಪ್ರಸ್ತುತ ಪರಮೇಶ್ವರನ್‌ ಅಯ್ಯರ್‌ ಈ ಹುದ್ದೆಯಲ್ಲಿದ್ದಾರೆ.

ಅಯ್ಯರ್ ಅವರು ವಿಶ್ವಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ವಾಷಿಂಗ್ಟನ್ ಡಿಸಿಯಲ್ಲಿರುವ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ.

ವಿಶ್ವಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ರಾಜೇಶ್ ಖುಲ್ಲರ್ ಬದಲಿಗೆ ಅಯ್ಯರ್ ನೇಮಕವಾಗಲಿದ್ದಾರೆ. ಖುಲ್ಲರ್ ಅವರು 1988 ರ ಬ್ಯಾಚ್‌ನ ಹರಿಯಾಣ ಕೇಡರ್ ಐಎಎಸ್ ಅಧಿಕಾರಿಯಾಗಿದ್ದು, ಅವರನ್ನು ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಅವರ ಸ್ವದೇಶಕ್ಕೆ ವಾಪಸ್ ಕಳುಹಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಯ್ಯರ್ ಅವರನ್ನು ಜುಲೈ 2022 ರಲ್ಲಿ ನೀತಿ ಆಯೋಗದ ಸಿಇಒ ಆಗಿ ನೇಮಿಸಲಾಯಿತು.