ದೀಪಾವಳಿ ಹಬ್ಬದಲ್ಲಿ ಗೋಪೂಜೆ ವೇಳೆ ಚಿನ್ನದ ಸರ ನುಂಗಿದ ಆಕಳು!

ಸಿದ್ದಾಪುರ: ದೀಪಾವಳಿ ಹಬ್ಬದ ಹಿನ್ನೆಲೆ ಗೋಪೂಜೆ ಮಾಡುವಾಗ ವೀಳ್ಯದೆಲೆ ಮೇಲೆ ಇಟ್ಟಿದ್ದ ಚಿನ್ನದ ಸರ ಗೋವಿನ ಹೊಟ್ಟೆ ಸೇರಿದೆ!
ಇಂತಹ ಘಟನೆ ಸಿದ್ದಾಪುರ ತಾಲೂಕಿನ ಮುಠ್ಠಳ್ಳಿ ಸಮೀಪದಲ್ಲಿ ಸಂಭವಿಸಿದೆ. ಊರತೋಟ ರಾವ ರಾಮಪ್ಪ ಹೆಗಡೆ ಅವರ ಮನೆಯಲ್ಲಿ ದೀಪಾವಳಿ ಹಬ್ಬದ ದಿನ ಗೋಪೂಜೆ ಹಮ್ಮಿಕೊಳ್ಳಲಾಗಿತ್ತು.
ಚಿನ್ನದ ಸರವನ್ನು ಆಕಳಿಗೆ ಕಟ್ಟಿ ಗೋಪೂಜೆ ಮಾಡುತ್ತಿದ್ದ ರಾವ ರಾಮಪ್ಪ ಹೆಗಡೆ ಅವರು ಚಿನ್ನದ ಸರವನ್ನು ತಂದು ಆಕಳ ಸಮೀಪ ವೀಳ್ಯದೆಲೆ ಮೇಲೆ ಇಟ್ಟಿದ್ದರು. ಕ್ಷಣಾರ್ಧದಲ್ಲಿ ಆಕಳು ಚಿನ್ನದ ಸರವನ್ನು ನುಂಗಿದೆ.