ಸಿಎಂ ಬೊಮ್ಮಾಯಿ ಭೇಟಿಯಾದ ನಟ ಪುನೀತ್ ಪತ್ನಿ ಅಶ್ವಿನಿ; 'ಗಂಧದ ಗುಡಿ' ಪ್ರೀ ರಿಲೀಸ್ ಇವೆಂಟ್ ಗೆ ಆಹ್ವಾನ

ಸಿಎಂ ಬೊಮ್ಮಾಯಿ ಭೇಟಿಯಾದ ನಟ ಪುನೀತ್ ಪತ್ನಿ ಅಶ್ವಿನಿ; 'ಗಂಧದ ಗುಡಿ' ಪ್ರೀ ರಿಲೀಸ್ ಇವೆಂಟ್ ಗೆ ಆಹ್ವಾನ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಸಿಎಂ ಬಸವರಾಜ್ ಬೊಮಾಯಿ ಅವರನ್ನು ಭೇಟಿಯಾಗಿ 'ಗಂಧದ ಗುಡಿ' ಪ್ರೀ ರಿಲೀಸ್ ಇವೆಂಟ್ ಗೆ ಆಹ್ವಾನ ನೀಡಿದರು.

ಬೆಂಗಳೂರು ನಗರದ ರೇಸ್ ಕೋರ್ಸ್ ರಸ್ತೆಯಲ್ಲಿನ ಸಿಎಂ ನಿವಾಸದಲ್ಲಿ ಭೇಟಿಯಾದ ಅಶ್ವಿನಿ, ಪುನೀತ್ ರಾಜ್ ಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್ 'ಗಂಧದ ಗುಡಿ' ಸಾಕ್ಷ್ಯ ಚಿತ್ರದ ಪ್ರಿರಿಲೀಸ್ ಇವೆಂಟ್ ಗೆ ಆಹ್ವಾನ ನೀಡಿದರು.

ಅ.21ರಂದು ಗಂಧದ ಗುಡಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ.

ಈ ಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ನಟ ರಾಘವೇಂದ್ರ ರಾಜಕುಮಾರ ಮತ್ತಿತರರು ಉಪಸ್ಥಿತರಿದ್ದರು