ಈಗಲಾದರೂ ಬಾಯ್ಬಿಡಿ ಮೋದಿಜೀ : ಕಪಿಲ್ ಸಿಬಲ್

ನವದೆಹಲಿ,ಅ.9-ಲಖೀಂಪುರ್ ಖೇರಿ ಘಟನೆ ಕುರಿತಂತೆ ಯಾಕೆ ಮೌನ ವಹಿಸಿದ್ದೀರಾ ಎಂದು ಮೋದಿ ಅವರನ್ನು ಪ್ರಶ್ನಿಸಿರುವ ಕಾಂಗ್ರೆಸ್‍ನ ಹಿರಿಯ ಮುಖಂಡ ಕಪಿಲ್ ಸಿಬಲ್ ಅವರು ಈಗಲಾದರೂ ಬಾಯ್ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಲಖೀಂಪುರ್ ಖೇರಿ ಘಟನೆ ಒಂದು ಭಯಾನಕ ಕೃತ್ಯ. ಆದರೂ ನೀವು ಸುಮ್ಮನಿದ್ದಿರಿ ಏಕೆ. ಈಗಲಾದರೂ ಒಂದು ಸಮಾಧನಕರ ಹೇಳಿಕೆ ನೀಡಿ ಎಂದು ಅವರು ಟ್ವಿಟ್ ಮಾಡಿದ್ದಾರೆ. ಈ ಹಿಂದೆ ಲಖೀಂಪುರ್ ಘಟನೆ ಕುರಿತಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಸಿಬಲ್ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.
ಸಿಬಲ್ ಮನವಿಯ ನಂತರ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿತ್ತು. ಇದಕ್ಕೆ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರಿಗೆ ಧನ್ಯವಾದ ಅರ್ಪಿಸಿದ್ದ ಸಿಬಲ್ ಅವರು ಭಾರತದ ನ್ಯಾಯಾಲಯಗಳು ಧ್ವನಿ ಇಲ್ಲದವರಿಗೆ ನ್ಯಾಯದ ದೇವಾಲಯವಾಗಿವೆ ಎಂದು ಬಣ್ಣಿಸಿದ್ದರು.