ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಮತ್ತೊಬ್ಬ ಆರೋಪಿ `NIA' ವಶಕ್ಕೆ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಮತ್ತೊಬ್ಬ ಆರೋಪಿ `NIA' ವಶಕ್ಕೆ

ಮಂಗಳೂರು : ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ.

ಎನ್ ಐಎ ಅಧಿಕಾರಿಗಳು ಶಾಹಿದ್ ಬೆಳ್ಳಾರೆ ಎಂಬಾತನನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದುದಿದ್ದಾರೆ. ಕಳೆದ ವಾರ ಬಂಧಿತರಾದ ಎಸ್ ಡಿಪಿಐ ಮುಖಂಡರಾದ ಶಾಫಿ ಬೆಳ್ಳಾರೆ ಮತ್ತು ಇಕ್ಬಾಲ್ ಬೆಳ್ಳಾರೆಗೆ ಶಾಹಿದ್ ಬೆಳ್ಳಾರೆ ಸಂಬಂಧವಿದೆ ಎನ್ನಲಾಗಿದೆ.

ಇನ್ನು ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ಸಂಬಂಧ ಶಾಹಿದ್ ಬೆಳ್ಳಾರೆ ಸೇರಿ ಬಂಧಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ. ಪ್ರವೀಣ್ ಕೊಒಲೆಯಾದ 2 ವಾರಗಳ ಅವಧಿಯಲ್ಲಿ 10 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು.