ವಿಶ್ವವಿಖ್ಯಾತ ಗೋಲಗುಮ್ಮಟದಿಂದ ಹಾರಿ ಯುವತಿ ಆತ್ಮಹತ್ಯೆ

ವಿಶ್ವವಿಖ್ಯಾತ ಗೋಲಗುಮ್ಮಟದಿಂದ ಹಾರಿ ಯುವತಿ ಆತ್ಮಹತ್ಯೆ

ವಿಜಯಪುರ : ಗೋಲಗುಮ್ಮಟದಲ್ಲಿ ಅಪರಿಚಿತ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.

ಗೋಲಗುಮ್ಮಟದ 7 ನೇ ಮಹಡಿಯ ಪಿಸುಗುಡೋ ಗ್ಯಾಲರಿಯಿಂದ ಯುವತಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ.

23 ವರ್ಷದ ಅಪರಿಚಿತ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸದ್ಯ ಶವವನ್ನು ವಿಜಯಪುರದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಪೊಲೀಸರು ಮೃತ ಯುವತಿ ವಿಳಾಸ ಪತ್ತೆಗೆ ಮುಂದಾಗಿದ್ದಾರೆ. ಈ ಸಂಬಂಧ ಗೋಲಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.