ಭೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಾಚರಣೆ ಅಂತ್ಯ; 3 ಗೋರಿಗಳ ಸ್ಥಳಾಂತರ

ಭೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಾಚರಣೆ ಅಂತ್ಯ; 3 ಗೋರಿಗಳ ಸ್ಥಳಾಂತರ

ಹುಬ್ಬಳ್ಳಿ: ಬಹು ವರ್ಷಗಳಿಂದ ವಿವಾದದ ಸುಳಿಯಲ್ಲಿದ್ದ ಹು- ಧಾ ಬಿಆರ್‌ಟಿಎಸ್ ಯೋಜನಾ ವ್ಯಾಪ್ತಿಯಲ್ಲಿ ಬರುವ ಭೈರಿದೇವರಕೊಪ್ಪದ ಹಜರತ್ ಸೈಯ್ಯದ್ ಮಹಮುದ್ ಶಾ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ ಅಂತ್ಯಗೊಂಡಿದೆ. ಯಂತ್ರಗಳ ಮೂಲಕ ಧರ್ಮ ಗುರುಗಳ ಸಮ್ಮುಖದಲ್ಲಿ 3 ಗೋರಿಗಳ ಸ್ಥಳಾಂತರ ಮಾಡಲಾಗಿದೆ. ಆದ್ರೆ ಇನ್ನೂ ದರ್ಗಾ ಸುತ್ತಮುತ್ತ ಪೊಲೀಸರು ಬ್ಯಾರಿಕೇಡ್ ತೆರವು ಮಾಡಿಲ್ಲ. ದರ್ಗಾ ಕಡೆ ಸಾರ್ವಜನಿಕರು ಬಾರದಂತೆ ಎಚ್ಚರವಹಿಸಲಾಗಿದೆ.