ಪಿ.ಯು.ಕಾಲೇಜುಗಳಿಗೆ ಇದೇ 10ರಿಂದ 17ರ ವರೆಗೆ ರಜೆ,
ಬೆಂಗಳೂರು ,
ರಾಜ್ಯ ಪಿ.ಯು.ಕಾಲೇಜುಗಳಿಗೆ ಇದೇ 10ರಿಂದ 17 ವರೆಗೆ ರಜೆ ನೀಡಲಾಗುವುದೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. 2021-22 ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ರಾಜ್ಯದ ಪದವಿ ಪೂರ್ವ ಕಾಲೇಜುಗಳಿಗೆ ಅಕ್ಟೋಬರ್ 10 ರಿಂದ ಅಕ್ಟೋಬರ್ 17 ರವರೆಗೆ ದಸರಾ ರಜೆ ಘೋಷಿಸಿಸಡ ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ. 2021-22 ಶೈಕ್ಷಣಿಕ ಸಾಲಿಗೆ ಪದವಿ ಪೂರ್ವ ಕಾಲೇಜುಗಳಲ್ಲಿ ಈಗಾಗಲೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದ್ದು, ಉಪನ್ಯಾಸಕರ ಸಂಘದ ಕೋರಿಕೆ ಹಿನ್ನೆಲೆ ದಸರಾ ರಜೆಯನ್ನು ದಿನಾಂಕ 10:10:2021 ರಿಂದ 18:10:2021 ರವರೆಗೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಇದೇ ವೇಳೆ ದಿನಾಂಕ 18:10:2021 ರಿಂದ ತರಗತಿ ಪುನಾರಂಭಿಸಲು ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಸೂಚನೆ ನೀಡಿದ್ದಾರೆ.