ಶ್ರೀ ರಾಮುಲು ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದು ಅವರಿಗೆ ಕಾಣುತ್ತಿಲ್ಲ : ಡಿಕೆಶಿ ಟಾಂಗ್

ಶ್ರೀ ರಾಮುಲು ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದು ಅವರಿಗೆ ಕಾಣುತ್ತಿಲ್ಲ : ಡಿಕೆಶಿ ಟಾಂಗ್

ಚಿತ್ರದುರ್ಗ : ಶ್ರೀ ರಾಮುಲು ಅಣ್ಣನ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ, ಅದರ ಕಡೆ ಗಮನ ಹರಿಸುವುದು ಬಿಟ್ಟು ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ನೋಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಕದನ ನಡೆಯುತ್ತಿದೆ. ಅವರು ಕಚ್ಚಾಡುವ ಚಿರತೆಗಳು ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದಕ್ಕೆ ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತಾಡಿದ ಅವರು ಶ್ರೀ ರಾಮುಲು ಅಣ್ಣನ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ, ಅದರ ಕಡೆ ಗಮನ ಹರಿಸುವುದು ಬಿಟ್ಟು ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ನೋಡುತ್ತಿದ್ದಾರೆ. ಚಾಮರಾಜಪೇಟೆಯಲ್ಲಿ ರೌಡಿಯೊಬ್ಬನಿಗೆ ಬಿಜೆಪಿ ಟಿಕೆಟ್ ನೀಡುವ ಯೋಚನೆ ಮಾಡುತ್ತಿದೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ ಆ ಪಕ್ಷದ ಸಂಸ್ಕೃತಿ ಗೊತ್ತುಮಾಡಿಕೊಳ್ಳಲು ಅಷ್ಟು ಸಾಕು ಎಂದು ಹೇಳಿದರು.