'ಬಸವಲಿಂಗ ಸ್ವಾಮೀಜಿ' ಆತ್ಮಹತ್ಯೆ ಪ್ರಕರಣ : ಮೃತ್ಯುಂಜಯ ಶ್ರೀ ಗೆ ಷರತ್ತು ಬದ್ದ ಜಾಮೀನು ಮಂಜೂರು

'ಬಸವಲಿಂಗ ಸ್ವಾಮೀಜಿ' ಆತ್ಮಹತ್ಯೆ ಪ್ರಕರಣ : ಮೃತ್ಯುಂಜಯ ಶ್ರೀ ಗೆ ಷರತ್ತು ಬದ್ದ ಜಾಮೀನು ಮಂಜೂರು

ರಾಮನಗರ: ಜಿಲ್ಲೆಯ ಶ್ರೀ ಕಂಚುಗಲ್ ಬಂಡೇಮಠದ ಗುರು ಮಡಿವಾಳೇಶ್ವರ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಗಡಿಯ ಕಣ್ಣೂರು ಮಠದ ಮೃತ್ಯುಂಜಯ ಶ್ರೀಗಳಿಗೆ ಹೈಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.

ಬಂಡೇಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ ಸಂಬಂಧಿಯಾಗಿದ್ದಂತ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿಯೇ ಹನಿಟ್ರ್ಯಾಫ್ ಮಾಡಿಸಿರೋದಾಗಿ ತಿಳಿದು ಬಂದಿತ್ತು.

ಈ ಸಂಬಂಧ ಪೊಲೀಸರು ಮೃತ್ಯುಂಜಯ ಶ್ರೀಗಳು ಹಾಗೂ ಅವರ ಜೊತೆಗೆ ಹನಿಟ್ರ್ಯಾಪ್ ಮಾಡಿದ್ದಂತ ಯುವತಿಯನ್ನು ಬಂಧಿಸಿದ್ದರು.
ಇದೀಗ ಮೃತ್ಯುಂಜಯ ಶ್ರೀ ಗೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಅಂದಹಾಗೇ ಶ್ರೀ ಕಂಚುಗಲ್ ಬಂಡೇಮಠದ ಗುರು ಮಡಿವಾಳೇಶ್ವರ ಬಸವಲಿಂಗ ಸ್ವಾಮೀಜಿ ಸ್ವಾಮೀಜಿ(45) ಮಠದಲ್ಲೇ ನೇಣಿಗೆ ಶರಣಾಗಿದ್ದರು. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿರುವ ಬಂಡೇಮಠದಲ್ಲಿ ನೇಣಿಗೆ ಶರಣಾಗಿದ್ದರು, . ಸ್ವಾಮೀಜಿ ವಿರುದ್ಧ ಹನಿಟ್ರ್ಯಾಪ್ ನಡೆದಿದ್ದು, ಡೆತ್ನೋಟ್ನಲ್ಲಿ ಸಂಚಿನ ಬಗ್ಗೆ ಕುಂಚಗಲ್ ಬಂಡೆಮಠದ ಬಸವಲಿಂಗಶ್ರೀ ಸ್ವಾಮೀಜಿ ಬರೆದಿದ್ದರು.