ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕತ್ತೆ, ಕುದುರೆ ಎಂಟ್ರೀ. ಕೇಳೋರಿಲ್ಲ, ಹೇಳೋರಿಲ್ಲ

ವಿಮಾನ ನಿಲ್ದಾಣ ಅಂದರೆ ಭದ್ರತೆಗೆ ಪ್ರಮುಖ ಆದ್ಯತೆ ಇದ್ದೇ ಇರುತ್ತೆ. ಆದ್ರೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತ್ರ ಇದು ತದ್ವಿರುದ್ಧವಾಗಿದೆ. ವಿಮಾನ ನಿಲ್ದಾಣ ಒಳಗಡೆ ಬೆಳೆದಿರುವ ಕಸವನ್ನು ಮೆಯಲು ಕುದುರೆ ಹಾಗೂ ಕತ್ತೆಗಳು ಬರುತ್ತಿವೆ ಹೇಳೋರಿಲ್ಲ. ಹೌದು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮನುಷ್ಯರಷ್ಟೇ ಅಲ್ಲ ಕತ್ತೆ ಕುದುರೆ ಕೂಡ ಬರಬಹುದು, ವಿಮಾನ ನಿಲ್ದಾಣಕ್ಕೆ ಮನುಷ್ಯರಷ್ಟೇ ಅಲ್ಲ ಪ್ರಾಣಿ ಕೂಡ ಬಂದ ಘಟನೆ ನಡೆದಿದೆ. ಇದನ್ನೆಲ್ಲಾ ಗಮನಿಸಿದರೆ ಹುಬ್ಬಳ್ಳಿಯ ವಿಮಾನ ನಿಲ್ದಾಣದ ಭದ್ರತಾ ವೈಫಲ್ಯ ಮೆಲ್ನೋಟಕ್ಕೆ ಕಂಡು ಬರುತ್ತಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ದಳದ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಬಂದೋಬಸ್ತ್ ನಲ್ಲಿ ಇದ್ದರೂ ಕುದುರೆಗಳು ವಿಮಾನ ನಿಲ್ದಾಣದ ಒಳಗಡೆ ಹೇಗೆ ಬರುತ್ತಿವೆ ಎಂಬುದು ಈಗ ಚರ್ಚೆಗೆ ಕಾರಣವಾಗಿದೆ.