ಶಾಲೆಗೆ ಹೋಗಬೇಕಾದ್ರೇ ಬಸ್ ಗೆ ಜೋತು ಬಿದ್ದು ಹೋಗಬೇಕು ಕವಲಗೇರಿ ವಿದ್ಯಾರ್ಥಿಗಳು

ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದ್ರೇ ಬಸ್ ಬಾಗಲಿಗೆ ಜೋತು ಬಿದ್ದು, ಹರಸಾಹಸ ಪಟ್ಟು ಶಾಲೆಗೆ ಹೋಗುವಂತ ಸ್ಥಿತಿ ಈ ಮಕ್ಕಳದಾಗಿದೆ. ಹೌದು ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ವಿದ್ಯಾರ್ಥಿಗಳು ಬಸ್ ನ ಪುಟ್ ಬೋರ್ಡ್ ನಲ್ಲಿ ಜೋತು ಬಿದ್ದು ಶಾಲೆಗೆ ತೆರಳುವಂತ ಪರಿಸ್ಥಿತಿ ಬಂದಿದೆ. ಕಳೆದ ಒಂದು ವರ್ಷದಿಂದ ಬಸ್ ಬಂದ ಮಾಡಿರುವ ಹಿನ್ನೆಲೆಯಲ್ಲಿ ಕವಲಗೇರಿ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಸರಿಯಾಗಿ ಹೆಚ್ಚುವರಿ ಬಸ್ ಸೌಕರ್ಯ ಇಲ್ಲದಾಗಿದೆ. ಇರುವ ಒಂದು ಬಸ್ ನಲ್ಲಿ ವಿದ್ಯಾರ್ಥಿಗಳು ಬಾಗಿಲನಲ್ಲಿ ಜೋತು ಬಿದ್ದು ಶಾಲೆಗೆ ಹೋಗುವಂತಾ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕುತ್ತಿರುವ ಕವಲಗೇರಿ ಗ್ರಾಮಸ್ಥರು, ಪ್ರತಿ ದಿನ ಇದೇ ರೀತಿ ಜೋತು ಬಿದ್ದ ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳು ಬಸ್ ಸೌಕರ್ಯ ಕಲ್ಪಿಸಿಕೊಡಿ ಅಂತಾ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ರು, ಇನ್ನುವರಿಗೆ ಬಸ್ ಬೀಡದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ರು. ಇದೇ ವೇಳೆಗೆ ಪ್ರತಿನಿತ್ಯ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಂಚಾರ ನಡೆಸುತ್ತಾರೆ. ಹಿಂದೆ ಇದ್ದ ಬಸ್ ಮರಳಿ ಬೀಡುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.....