ಅಕಾಲಿಕ ಮಳೆಯಿಂದ ಕುಸಿದ ಮನೆಗಳು
ರಾಜ್ಯಾದ್ಯಂತ ಮಳೆರಾಯನ ಆರ್ಭಟ ಜೋರಾಗಿದ್ದು. ಈ ವರುಣ ಅಬ್ಬರ ರೈತರ ಬೆಳೆ ಹಾನಿಗೆ ಕಾರಣವಾಯಿತು. ಅಲ್ಲದೆ ಗ್ರಾಮೀಣ ಭಾಗಗಳಲ್ಲಿ ಬಡವರು ಕಟ್ಟಿದ ಗೂಡುಗಳನ್ನು ಕೇಡವಿತ್ತು. ಅದ್ರಂತೆ ಧಾರವಾಡ ಜಿಲ್ಲೆಯಾದ್ಯಂತ ಅಕಾಲಿಕ ಮಳೆ ಗ್ರಾಮೀಣ ಭಾಗದಲ್ಲಿ ಧಾರಕಾರ ಎರಡ ಮೂರು ದಿನಗಳಿಂದ ಹಗಲು ರಾತ್ರಿ ಅನ್ನದೆ ಸುರಿಯುತ್ತಿದ್ದು. ದೊಡ್ಡದಾದ ಗಾಳಿ, ರಪಾ ರಪಾ ಅಂತಾ ಜಿಲ್ಲೆಯಾದ್ಯಂತ ಅಕಾಲಿಕ ಮಳೆ ಗ್ರಾಮೀಣ ಭಾಗದಲ್ಲಿ ಧಾರಕಾರ ಧಾರವಾಡ ತಾಲೂಕಿನ ಶಿವಳ್ಳಿ, ಗೋವನಕೊಪ್ಪ, ಸೋಮಾಪುರ ಗ್ರಾಮಗಳಲ್ಲಿ ಸುಮಾರು ಮನೆಗಳು ಕುಸಿದು ಬಿದ್ದಿವೆ. ಅಕಾಲಿಕವಾಗಿ ವರುಣ ಬಂದು ರೈತರ ಮನೆಗಳು ನೀರುಪಾಲಗಿವೆ. ಇನ್ನಾದರೂ ಜಿಲ್ಲೆಯಾದ್ಯಂತ ಮಳೆರಾಯ ತನ್ನ ಆರ್ಭಟ ನಿಲ್ಲಿಸುತ್ತಾನ ಎಂಬುವುದು ಕಾದೋ ನೋಡಬೇಕಿದೆ.