ಬಿಟ್ ಕಾಯಿನ್ ಚುನಾವಣೆಗಾಗಿ ಕಾಂಗ್ರೆಸ್ ಮಾಡಿರೋ ನಾಟಕದ ಕಂಪನಿ ಆಗಿದೆ.ಸಚಿವ ಅಶೋಕ

ಬಿಟ್ ಕಾಯಿನ್ ಚುನಾವಣೆಗಾಗಿ ಕಾಂಗ್ರೆಸ್ ಮಾಡಿರೋ ನಾಟಕದ, ಈ ಕಂಪನಿಗೆ ಅವರೇ ಡೈರಕ್ಟರ್, ಪ್ರೊಡ್ಯೂಸರ್, ಆ್ಯಕ್ಟರ್, ಜನ ನೋಡಲಿ ಎಂದು ಹೇಳುತ್ತಿದ್ದಾರೆ, ಆದ್ರೆ, ಜನ ಯಾರೂ ಬರ್ತಿಲ್ಲ ಎಂದು ಸಚಿವ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯ ಆಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಟ್ ಕಾಯಿನ್ ಚುನಾವಣೆಗಾಗಿ ಕಾಂಗ್ರೆಸ್ ಮಾಡಿರೋ ನಾಟಕ ಪ್ರಾರಂಭ ಮಾಡಿದ್ದೂ ಅವರೇ, ಅಂತ್ಯ ಹಾಡಬೇಕಿರೋದೂ ಅವರೇ ಹೆಸರನ್ನೂ ಅವರೇ ಹೇಳಬೇಕು. ನಿಮಗೆ ಹೆಸರು ನೀಡಲು ಆಗಲ್ಲ ಅಂದ್ರೆ ನೀವು ಯಾವ ಸೀಮೆ ವಿರೋಧ ಪಕ್ಷದ ನಾಯಕರು ಇದೆಲ್ಲಾ ಕಾಂಗ್ರೆಸ್ಸಿಗರ ನಾಟಕ, ಹಾವು ಬಿಡ್ತೀನಿ, ಹಾವು ಬಿಡ್ತೀನಿ ಅಂತ ನಾಟಕ ಮಾಡ್ತಿದ್ದಾರೆ. ಕಾಂಗ್ರಸಗರು ಯಾವುದೇ ಹಳ್ಳಿಗೆ ಹೋಗಿ ಹಾವು ಬಿಡಲಿ, ಹಾವು ಹಿಡಿಯಲು ನಮ್ಮ ಬಳಿ ಜನ ಇದ್ದಾರೆ, ಹಾವು ಬಿಟ್ಟ ಮೇಲೆ ಕರಿದೋ, ಬಿಳಿದೋ, ನಾಗರಹಾವೋ, ಹೆಬ್ಬಾವೋ ಹೇಳ್ತೀನಿ, ಹಾವು ಬಿಡದೆ ನಾವು ಯಾವ ಹಾವೆಂದು ಹೇಗೆ ಪರೀಕ್ಷೆ ಮಾಡೋದು ಎಂದು ಕಂದಾಯ ಸಚಿವ ಆರ್. ಅಶೋಕ್ ಕಾಂಗ್ರೆಸ್ ಕಾಲೆಳೆದರು...