ತರಾತುರಿಯಲ್ಲಿ ದೇವಸ್ಥಾನ ಕೇಡವೋದು ಸಮಂಜಸವಲ್ಲ

ದೇವಸ್ಥಾನ ತೆರವುಗೊಳಿಸುವುದು ಬಹಳ ಸೂಕ್ಷ್ಮ ವಿಚಾರ ಯಾವುದೇ ಧಾರ್ಮಿಕ ಕಟ್ಟಡ ತೆರವುಗೊಳಿಸಬೇಕಾದರೂ ಅದರ ಹಿನ್ನೆಲೆ ತಿಳಿದುಕೊಂಡು ಸಂಪೂರ್ಣ ಅವಲೋಕನ ಮಾಡಿ ನಂತರ ನಿರ್ಧಾರ ತೆಗೆದುಕೊಳ್ಳಬೇಕು. ತರಾತುರಿಯಲ್ಲಿ ದೇವಸ್ಥಾನ ತೆರವುಗೊಳಿಸುವುದು ಸರಿಯಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಧಾರ್ಮಿಕ ಕಟ್ಟಡ ತೆರವುಗೊಳಿಸಬೇಕಾದರೂ ಅದರ ಬಗ್ಗೆ ಪುರ್ವಾಪರ ಇತಿಹಾಸ ತಿಳಿದುಕೊಳ್ಳುವುದು ಸೂಕ್ತ. 2008-09 ರಲ್ಲೇ ಸುಪ್ರೀಂ ಆದೇಶ ಹೋರಡಿಸಿತ್ತು ಅದರಲ್ಲಿ ಕೆಲ ಕಂಡೀಷನಗಳು ಇದ್ದವು. ಅವುಗಳನ್ನೆಲ್ಲ ಪರಿಶೀಲಿಸಿ ದೇವಸ್ಥಾನ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಇಳಿಯಬೇಕು ಎಂದರು.