ಹಾಸನ 'ಡೆಡ್ಲಿ ಅಪಘಾತ' : ಅನುಕಂಪದ ಮೇಲೆ ಚೈತ್ರಾಗೆ ಸಿಕ್ಕಿತ್ತು 'ಸರ್ಕಾರಿ ನೌಕರಿ' : ವಿಧಿ ನೀನೆಷ್ಟು ಕ್ರೂರಿ..?

ಹಾಸನ 'ಡೆಡ್ಲಿ ಅಪಘಾತ' : ಅನುಕಂಪದ ಮೇಲೆ ಚೈತ್ರಾಗೆ ಸಿಕ್ಕಿತ್ತು 'ಸರ್ಕಾರಿ ನೌಕರಿ' : ವಿಧಿ ನೀನೆಷ್ಟು ಕ್ರೂರಿ..?

ಹಾಸನ : ಹಾಸನಜಿಲ್ಲೆಯಅರಸೀಕೆರೆತಾಲ್ಲೂಕಿನಬಾಣವಾರಹೋಬಳಿಗಾಂಧಿನಗರ ಗ್ರಾಮದ ಬಳಿ ತಡರಾತ್ರಿ ಸಂಭವಿಸಿದ ಭೀಕರ ಅಪಘಾತಕ್ಕೆ ಇಡೀ ರಾಜ್ಯವೇ ಮಮ್ಮರುಲ ಮರುಗಿದ್ದು, ಇಡೀ ರಾಜ್ಯವೇ ಕಂಬನಿ ಮಿಡಿದಿದೆ.

ಭೀಕರಸರಣಿಅಪಘಾತದಲ್ಲಿ 5 ಮಕ್ಕಳುಸೇರಿದಂತೆ 9 ಜನರುಇಹಲೋಕ ತ್ಯಜಿಸಿದ್ದಾರೆ.

ಮೃತ 9 ಮಂದಿಯಲ್ಲಿ ಚೈತ್ರಾ ಎಂಬುವವರ ಕತೆ ಕೇಳಿದ್ರೆ ಕಣ್ಣಲ್ಲಿ ನೀರು ಜಿನುಗುತ್ತದೆ. ಕಳೆದ ವರ್ಷದ ಹಿಂದೆ ಚೈತ್ರಾ ಅವರ ಪತಿ ಶ್ರೀನಿವಾಸ್ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಕೆ ಎಸ್ ಆರ್ ಟಿಸಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಮೃತಪಟ್ಟ ಹಿನ್ನೆಲೆ ಅನುಕಂಪ ಆಧಾರದ ಮೇಲೆ ಚೈತ್ರಾ ಅವರಿಗೆ ಇತ್ತೀಚೆಗೆ ಸರ್ಕಾರಿ ಕೆಲಸದ ಆದೇಶ ಬಂದಿತ್ತು. ಮುಂದಿನ ಮಂಗಳವಾರಅವರು ಕೆಲಸಕ್ಕೆ ಹಾಜರಾಗಬೇಕಿತ್ತು, ಆದರೆ ವಿಧಿ ಲಿಖಿತ ಎಷ್ಟು ಘೋರ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ..ಶುಕ್ರವಾರ ದೇವರ ದರ್ಶನಕ್ಕೆ ಹೊರಟ್ಟಿದ್ದ ಚೈತ್ರಾ ಹಾಗೂ ಕುಟುಂಬದವರು ಶನಿವಾರ ನಡೆದ ಭೀಕರ ದುರಂತದಲ್ಲಿ ಮೃತಪಟ್ಟಿದ್ದಾರೆ . ಚೈತ್ರಾ ಜೊತೆಗೆ ಮಕ್ಕಳಾದ ಸಮರ್ಥ್, ಸೃಷ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೇವರ ದರ್ಶನಕ್ಕೆ ಹೋದವರು ಇಹಲೋಕ ತ್ಯಜಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಕೆಎಸ್​ಆರ್​ಟಿ ಬಸ್, ಟಿಟಿ ವಾಹನ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಟೆಂಪೋ ಟ್ರಾವೆಲರ್​ನಲ್ಲಿದ್ದ 5 ಮಕ್ಕಳು ಸೇರಿದಂತೆ ಒಟ್ಟು 9 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಟಿಟಿ ವಾಹನದಲ್ಲಿ 14 ಮಂದಿ ಧರ್ಮಸ್ಥಳಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಲಾರಿ ಬಸ್ ಮಧ್ಯೆ ಸಿಲುಕಿ ಟಿಟಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.

ಹಾಸನದಲ್ಲಿ ಇಂದು ನಡೆದಿರುವಂತ ಭೀಕರ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದರು.ಅಲ್ಲದೇ ಅನೇಕರು ಗಾಯಗೊಂಡಿದ್ದರು. ಪ್ರಕರಣ ಸಂಬಂಧ ಕ್ಯಾಂಟರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತಕ್ಕೆ ಕಾರಣವಾಗಿದ್ದ ಹಾಲಿನ ಟ್ಯಾಂಕರ್ ಚಾಲಕ ನವೀನ್, ಅಪಘಾತ ನಂತರ ವಾಹನ ಬಿಟ್ಟು ಪರಾರಿಯಾಗಿದ್ದನು. ಇದೀಗ ನವೀನ್‍ನನ್ನು ಬಾಣಾವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನೂ, ಸಿಎಂ ಬಸವರಾಜ ಬೊಮ್ಮಾಯಿಯವರು ( CM Basavaraj Bommai ) ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹಾಸನದಲ್ಲಿ ನಡೆದಿರುವಂತ ಅಪಘಾತದಿಂದ ನೋವು ತಂದಿದೆ. ಮೃತರ ಕುಟುಂಬಸ್ಥರಿಗೆ ದುಖ ಭರಿಸುವಂತ ಶಕ್ತಿಯನ್ನು ದೇವರು ನೀಡಲಿ. ಮೃತರ ಆತ್ಮಕ್ಕೆ ಶಾಂತಿಯನ್ನು ಸಿಗಲಿದೆ ಎಂದರು.