ಜಾರ್ಖಂಡ್ನಲ್ಲಿ ಪತ್ತೆಯಾಯ್ತು ಅಪರೂಪದ ಪ್ರಾಣಿ
ಜಾರ್ಖಂಡ್ನ ಕೊಡೆರ್ಮಾದಲ್ಲಿ ಮೊದಲ ಬಾರಿಗೆ ಬೂದು ಬಣ್ಣದ ತೋಳವೊಂದು ಪತ್ತೆಯಾಗಿದೆ. ಕೊಡೆರ್ಮಾ ಮತ್ತು ಹಜಾರಿಬಾಗ್ ವನ್ಯಜೀವಿ ವಿಭಾಗಗಳಲ್ಲಿ ಸಮೀಕ್ಷೆ ನಡೆಸುತ್ತಿರುವ ಡೆಹ್ರಾಡೂನ್ ಮೂಲದ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ 10 ಸದಸ್ಯರ ತಂಡ ಜಾರ್ಖಂಡ್‌ನಲ್ಲಿಅಳಿವಿನಂಚಿನಲ್ಲಿರುವ ಭಾರತೀಯ ಬೂದು ತೋಳವನ್ನು ಪತ್ತೆಹಚ್ಚಿದೆ. ಈ ತೋಳಗಳು ಹೆಚ್ಚಾಗಿ ಮಹಾರಾಷ್ಟ್ರ, ಒಡಿಶಾ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಕಂಡುಬರುತ್ತವೆ.