ಬಳ್ಳಾರಿ ವಿಮಾನ ನಿಲ್ದಾಣ ಒಪ್ಪಂದ ರದ್ದುಪಡಿಸಿದ ರಾಜ್ಯ ಸರ್ಕಾರ

ಬಳ್ಳಾರಿ: ಚಾಗನೂರಿನಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಚೆನ್ನೈ ಮೂಲದ ಮಾರ್ಗ್ ಕಂಪೆನಿ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ. ಮೂಲಸೌಲಭ್ಯ ಇಲಾಖೆ ಎ.4ರಂದು ಮಾರ್ಗ್ ಜೊತೆಗಿನ ಒಪ್ಪಂದ ರದ್ಧತಿಗೆ ಶಿಫಾರಸು ಮಾಡಿತ್ತು. ನ.2ರಂದು ಸೇರಿದ್ದ ಸಂಪುಟ ಸಭೆಯಲ್ಲಿ ಶಿಫಾರಸಿಗೆ ಅನಮತಿ ದೊರೆತ ಕಾರಣ ಒಪ್ಪಂದ ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ. KSYYDC ಸ್ಪರ್ಧಾತ್ಮಕ ಬಿಡ್ ಕರೆದು ಇಪಿಸಿ ಮಾದರಿಯಲ್ಲಿ ವಿಮಾನ ನಿಲ್ದಾಣ ಯೋಜನೆ ಅನುಷ್ಠಾನ ಮಾಡಲಿದೆ.