15 ವರ್ಷ ಹಳೆಯ ವಾಹನ ಗುಜರಿ ನೀತಿ ಏಕಗವಾಕ್ಷಿ ವ್ಯವಸ್ಥೆಗೆ ಕರ್ನಾಟಕ ಸೇರ್ಪಡೆ
ಬೆಂಗಳೂರು: ವಾಹನಗಳ ಗುಜರಿ ನೀತಿ ಏಕಗವಾಕ್ಷಿ ಯೋಜನೆಗೆ ಕರ್ನಾಟಕ ಸೇರ್ಪಡೆಯಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದ 15 ವರ್ಷಕ್ಕಿಂತ ಹಳೆಯ ವಾಹನಗಳ ಗುಜರಿ ನೀತಿಯ ಏಕಗವಾಕ್ಷಿ ಯೋಜನೆಗೆ ಕರ್ನಾಟಕ ಸೇರಿದಂತೆ 11 ರಾಜ್ಯಗಳು ಸೇರ್ಪಡೆಯಾಗಿವೆ.
ಖಾಸಗಿ ಕಂಪನಿಗಳು ವಾಹನ ಗುಜರಿ ಘಟಕ ಆರಂಭಿಸಲು ಅರ್ಜಿ ಸಲ್ಲಿಸಲು ಅನುಕೂಲವಾಗಲಿದ್ದು, ಈಗಾಗಲೇ 117 ಹೂಡಿಕೆದಾರರು ಘಟಕ ಸ್ಥಾಪನೆಗೆ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 36 ಅರ್ಜಿಗಳು ಅನುಮೋದನೆಗೊಂಡಿವೆ. 11 ರಾಜ್ಯಗಳ ಗುಜರಿ ಉದ್ಯಮಿಗಳು ಏಕಗವಾಕ್ಷಿ ವ್ಯವಸ್ಥೆಗೆ ಅರ್ಜಿ ಸಲ್ಲಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುಮೋದನೆ ಪಡೆಯಲು ಅನುಕೂಲವಾಗಲಿದೆ.