ಕಿತ್ತೂರು ರಾಣಿ ಚೆನ್ನಮ್ಮಾಜಿ ಅವರ ಧೈರ್ಯ - ಪರಾಕ್ರಮ ಜಗತ್ತೇ ಮೆಚ್ಚುವಂತದ್ದು ಅಣ್ಣಾಸಾಹೇಬ ಜೊಲ್ಲೆ

ಬೆಳಗಾವಿ ಜಿಲ್ಲೆಯ ಕಾಕತಿ ಗ್ರಾಮದಲ್ಲಿ, ವೀರ ರಾಣಿ ಚೆನ್ನಮ್ಮಾಜಿ ಜನ್ಮದಿನದ ಹಿನ್ನೆಲೆಯಲ್ಲಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರು ಮೆರವಣಿಗೆ ಮೂಲಕ ತೆರಳಿ, ಚೆನ್ನಮ್ಮಾಜಿಯ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಅನಂತರ ಮಾತನಾಡಿದ ಅವರು ನಮ್ಮ ನಾಡು ಆಂಗ್ಲರ ಪಾಲಾಗದಂತೆ ಅವರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ನಾಡಿನ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮಾಜಿ ಅವರ ಧೈರ್ಯ - ಪರಾಕ್ರಮ ಜಗತ್ತೇ ಮೆಚ್ಚುವಂತದ್ದು. ಅವರ ತ್ಯಾಗ - ಬಲಿದಾನ, ದೇಶ ಪ್ರೇಮ ಸ್ಮರಣೀಯ ಎಂದು ಹೇಳಿದರು. ಪೂಜ್ಯ ಶ್ರೀ ರಾಚಯ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಉದಯ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ನಡೆದ "ರಾಣಿ ಚೆನ್ನಮ್ಮ ಜಯಂತೋತ್ಸವ"ದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಎಮ್.ಜಿ. ಹಿರೇಮಠ, ಹಿರಿಯ ಉಪವಿಭಾಗಾಧಿಕಾರಿಗಳಾದ ಶ್ರೀ ರವೀಂದ್ರ ಕರಲಿಂಗಣ್ಣವರ, ಕಿತ್ತೂರು ಚೆನ್ನಮ್ಮ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಡಾ. ಎಸ್.ಡಿ.ಪಾಟೀಲ, ಸೇರಿದಂತೆ ಅನೇಕರು ಭಾಗವಹಿಸಿದ್ದರು.