ಇವರಂತೆ ರಾಜಕೀಯ ಗೋಸುಂಬೆ ನಾನಲ್ಲ; ಧಮ್, ತಾಕತ್ತಿದರೆ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲಿ: ಬಿ.ಕೆ.ಹರಿಪ್ರಸಾದ್ ಸವಾಲು
ಬಾಗಲಕೋಟೆ: ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಬಿಜೆಪಿಯಲ್ಲಿ ಯತ್ನಾಳ್ ಹೇಳಿಕೆಗೆ ಯಾರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಅವರಿಗೆ ಯಾವ ಧೈರ್ಯವೂ ಇಲ್ಲ ಧಮ್, ತಾಕತ್ತು ಇದ್ದರೆ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಯತ್ನಾಳ್, ಸಚಿವರನ್ನು ಪಿಂಪ್ ಎಂದು ಹೇಳಿದ್ದಾರೆ. ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಲು ಯಾವ ಗಂಡಸರೂ ಇಲ್ಲ. ಧಮ್ ಇದ್ದರೆ, ತಾಕತ್ತಿದ್ದರೆ ಯತ್ನಾಳ್ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳಲಿ ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಇಂದಲ್ಲ ನಾಳೆ ಬಿಜೆಪಿಯವರಿಗೆ ಜನರು ಬುದ್ಧಿ ಕಲಿಸುತ್ತಾರೆ. ನಾನು ಹಿಂಬಾಗಿಲ ಮೂಲಕ ಬಂದವನು ಎಂದು ಹೇಳುತ್ತಾರೆ. ಇವರಂತೆ ಸಿ ಗ್ರೇಡ್ ಬಾಗಿಲಿಂದ ಬಂದವನಲ್ಲ. ನಾನು ರಾಜಮಾರ್ಗದಿಂದ ಬಂದವನು. ಇವರಂತೆ ಬಣ್ಣ ಬದಲಿಸುವ ರಾಜಕೀಯ ಗೋಸುಂಬೆ ನಾನಲ್ಲ ಎಂದು ಕಿಡಿಕಾರಿದ್ದಾರೆ.